ಬೆಳಗಾವಿ- ಗಡಿನಾಡ ಗುಡಿಯ ಘಂಟೆಯಿಂದ ಇಂದು ಈಡೀ ದಿನ ಕನ್ನಡದ ನೀನಾದ ಕೇಳಿಬಂದಿತು ಎಲ್ಲಿ ನೋಡಿದಲ್ಲಿ ಕನ್ನಡದ ಬಾವುಟಗಳು ಹಾರಾಡಿದವು ಲಕ್ಷಾಂತರ ಜನ ಕನ್ನಡ ತಾಯಿಯ ತೇರು ಎಳೆದು ಕುಣಿದು ಕುಪ್ಪಳಿಸಿದರು ಕನ್ನಡ ಅಭಿಮಾನಿಗಳ ಸಾಗರವೇ ಇಂದು ಬೆಳಗಾವಿಗೆ ಹರಿದು ಬಂದು ಬೆಳಗಾವಿಯ ಕಣ ಕಣದಲ್ಲಿಯೂ ಕನ್ನಡ ಕುಣಿದಾಡಿತು
ಗಡಿನಾಡು ಕುಂದಾನಗರಿಯಲ್ಲಿ ಅದ್ದೂರಿ ರಾಜ್ಯೋತ್ಸವ ನಡೆದಿದ್ದು, ಹೆಲಿಕಾಪ್ಟರ್ ಮೂಲಕ ರಾಣಿ ಚೆನ್ನಮ್ಮನಿಗೆ ಪುಷ್ಪವೃಷ್ಠಿ ಮಾಡುವ ಮೂಲಕ ರಾಜ್ಯೋತ್ಸವ ಹಿಂದೆಂದಿಗಿಂತಲೂ ಅದ್ದೂರಿಯಾಗಿ ನಡೆಯಿತು. ಹುಕ್ಕೇರಿ ಶ್ರೀಗಳು ಹೋಳಿ ಊಟ ಹಾಕಿಸಿದ್ರೆ…ಇತ್ತ ಡಿಸಿ ಸಾಂಗಗಳಿಗೆ ಪಡ್ಡೆಹೈಕಳು ಹುಚ್ಚೆದ್ದು ಕುಣಿದು, ಯಾರಪ್ಪಂದ್ ಏನೈತಿ ಬೆಳಗಾವಿ ನಮ್ಮ್ದೈತಿ ಅಂತಾ ಶಕ್ತಿ ಪ್ರದರ್ಶನ ಮಾಡಿದ್ರು.
ಕುಂದಾನಗರಿ ಬೆಳಗಾವಿಯಲ್ಲಿ ಇದೇ ಮೊದಲ ಭಾರಿಗೆ ಮಧ್ಯರಾತ್ರಿಯಿಂದಲೇ ರಾಜ್ಯೋತ್ಸವ ಸಂಭ್ರಮ ಆರಂಭಿಸಿದ್ರು.. ಬಳಿಕ ಬೆಳಗ್ಗೆ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಧ್ವಜಾರೋಹಣ ನಡೆಸುವ ಮೂಲಕ ರಾಜ್ಯೋತ್ಸವ ಮೆರವಣಿಗೆ ಚಾಲನೆ ನೀಡಿದರು. ಬಳಿಕ 60 ಕ್ಕೂ ಹೆಚ್ಚು ಕಲಾ ತಂಡಗಳು ಹಾಗೂ ವಿವಿಧ ರೂಪಕಗಳ ಮೆರವಣಿಗೆ ಸಾವಿರಾರು ಜನರು ಸಾಕ್ಷಿಯಾದ್ರು. ಬೆಳಗ್ಗೆ ಆರಂಭವಾದ ಮೆರವಣಿಗೆ ಸಂಜೆ ವರೆಗೂ ಅದ್ಧೂರಿ ನಡೆಯಿತು. ಡಿಜೆ ಹಾಡಿಗೆ ಹೆಜ್ಜೆ ಹಾಕಿದ ಕನ್ನಡಾಭಿಮಾನಿಗಳು, ಕನ್ನಡ ಬಾವುಟ ಹಿಡಿದು ಯಾರಪ್ಪಂದ್ ಏನೈತಿ ಬೆಳಗಾವಿ ನಮ್ಮ್ದೈತಿ ಅಂತಾ ನಾಡದ್ರೋಹಿಗಳಿಗೆ ಬೂಸುಗುಟ್ಟಿದ್ದರು.
ಇನ್ನೂ ಕರ್ನಾಟಕ ಯುವ ವೇದಿಕೆ
ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ದವಾಗಿ ಕರಾಳ ದಿನಾಚರಿಸುವ ನಾಡದ್ರೋಹಿಗಳು ಸರ್ವನಾಶವಾಗ್ಲಿ ಅಂತಾ ರುದ್ರಾಭಿಷೇಕ, ಹೋಮವನ್ನ ಮಾಡಿಸಿದ್ರು.ಈ ಹೋಮದಲ್ಲಿ ಮೇಯರ್ ಬಸಪ್ಪ ಚಿಕ್ಕಲ್ಲದ್ದಿನಿ ಭಾಗವಹಿಸಿ ಗಮನ ಸೆಳೆದ್ರು..ಅತ್ತ ಒಂದೆಡೆ ಅದ್ಧೂರಿ ರಾಜ್ಯೋತ್ಸವ ಮೆರವಣಿಗೆ ನಡದ್ರೆ..ಇತ್ತ ಸರ್ದಾರ ಮೈದಾನದಲ್ಲಿ ಹುಕ್ಕೇರಿ ಮಠದ ಚಂದ್ರಶೇಖರ ಶ್ರೀಗಳಿಂದ ಹೋಳಿ ಊಟ ರಾಜ್ಯೋತ್ಸವ ಕಳೆಹಿಮೆಚ್ಚಿಸಿತು. ಹೋಟೆಲ್ ಮಾಲೀಕರು 10 ಸಾವಿರ ಲಂಡು ವಿತರಿಸಿದ್ರು.
ಇನ್ನೂ ಬೆಳಗಾವಿ ನಗರದಾದ್ಯಂತ ಸಾವಿರಾರು ಪೋಲಿಸರು ಭಾರೀ ಕಟ್ಟೆಚ್ಚರ ವಹಿಸಿದ್ದರು. ಒಟ್ನಲ್ಲಿ ಒಂದೆಡೆ ಕುಂದಾನಗರಿ ಬೆಳಗಾವಿ ಅದ್ದೂರಿ ರಾಜ್ಯೋತ್ಸವಕ್ಕೆ ಸಾಕ್ಷಿಯಾದರೇ ಅತ್ತ ನಾಡದ್ರೋಹಿಗಳು ಮುಖಭಂಗ ಅನುಭವಿಸಿದ್ದಂತೂ ಸುಳ್ಳಲ್ಲ.