Breaking News
Home / Breaking News / ಪಾಲಿಕೆಯಲ್ಲಿ ರಾಜ್ಯೋತ್ಸವ ಆಚರಿಸಿ ,ಕರಾಳ ದಿನಾಚರಣೆಯಲ್ಲೂ ಪಾಲ್ಗೊಂಡ ಉಪ ಮೇಯರ್

ಪಾಲಿಕೆಯಲ್ಲಿ ರಾಜ್ಯೋತ್ಸವ ಆಚರಿಸಿ ,ಕರಾಳ ದಿನಾಚರಣೆಯಲ್ಲೂ ಪಾಲ್ಗೊಂಡ ಉಪ ಮೇಯರ್

ಬೆಳಗಾವಿ- ಬೆಳಗಾವಿ ಮಹಾನಗ ಪಾಲಿಕೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಲಿಕೆಯ ಕೌನ್ಸಿಲ್ ಹಾಲ್ ನಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಕನ್ನಡದ ಸಂಪ್ರದಾಯ ಆರಂಭಿಸಲಾಯಿತು

ಪಾಲಿಕೆಯಲ್ಲಿ ಭುವನೇಶ್ವರಿ ದೇವಿಗೆ ಪೂಜೆ ನೆರವೇರಿಸಿ ರಾಜ್ಯೋತ್ಸವ ಆಚರಿಸಿದ ಉಪ ಮೇಯರ್ ಮಧುಶ್ರೀ ಪೂಜಾರಿ ನಂತರ ಎಂ ಈ ಎಸ್ ಕರಾಳ ದಿನಾಚರಣೆಯಲ್ಲೂ ಭಾಗವಹಿಸಿ ಪುಂಡಾಟಿಕೆ ಪ್ರದರ್ಶಿಸಿದ್ದಾರೆ

ಪಾಲಿಕೆಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೇಯರ್ ಬಸವರಾಜ ಚಿಕ್ಕಲದಿನ್ನಿ,ಪಾಲಿಕೆ ಆಯುಕ್ತ ಶಶಿಧರ ಕುರೇರ, ಸೇರಿದಂತೆ ಇತರ ಕನ್ನಡದ ನಗರ ಸೇವಕರು ಅಧಿಕಾರಿಗಳು ಭಾಗವಹಿಸಿದ್ದರು

ಬೆಳಗಾವಿಯಲ್ಲಿ ನಡೆದ ಎಂಇಎಸ್ ಕರಾಳ ದಿನಾಚರಣೆಯ ಸೈಕಲ್ ರ್ಯಾಲಿಯಲ್ಲಿ
ಕಾರ್ಯಕರ್ತರ ಪುಂಡಾಟಿಕೆ ನಡೆಸಿದರು ಈ ಸಂಧರ್ಭದಲ್ಲಿ ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಲಾಯಿತು ಕಿಡಗೇಡಿಗಳು ಪೊಲೀಸರ ವಾಹನದ ಮೇಲೆ ಪಟಾಕಿ ಸಿಡಿಸಿ ಪುಂಡಾಟಿಕೆ ಪ್ರದರ್ಶಿದಾಗ ಪೊಲೀಸರು ಲಘು ಲಾಠಿ ಪ್ರಹಾರ ಪರಿಸ್ಥಿತಿಯನ್ನು ನಿಯಂತ್ರಿಸಿದರು

ಎಂಈಎಸ್ ಸೈಕಲ್ ರ್ಯಾಲಿ ಉತ್ತೇಜನ ಕಳೆದುಕೊಂಡಿತ್ತು ರ್ಯಾಲಿಗೆ ಅಷ್ಟೊಂದು ಜನ ಬೆಂಬಲ ಸಿಗದೇ ಸೈಕಲ್ ಪಂಕ್ಚರ್ ಆಗಿ ರ್ಯಾಲಿ ಸಂಪೂರ್ಣವಾಗಿ ಠುಸ್ಸಾಯಿತು

ಬೆಳಗಾವಿಯಲ್ಲಿ ಕನ್ನಡಿಗರ ಸಡಗರ ಸಂಬ್ರಮ ನೋಡಿ ಸಹಿಸಲಾಗದ ಎಂ ಈ ಎಸ್ ಪುಂಡರು ಕನ್ನಡ ಶಾಲೆಯ ಮೇಲೆ ಕಪ್ಪು ಬಾವುಟ ಹಾರಿಸಿದ್ದಾರೆ
ಕೊಂಡಸಕೊಪ್ಪ ಗ್ರಾಮದ ಕನ್ನಡ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ ಕಪ್ಪು ಬಾವುಟ ಕಿತ್ತೆಸೆದ ಕನ್ನಡ ಪರ ಕಾರ್ಯಕರ್ತ ಕನ್ನಡದ ಅಭಿಮಾನ ತೋರಿಸಿದ್ದಾರೆ

ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನ ಆಚರಣೆ.
ಕರಾಳ ದಿನ ಆಚರಣೆಯಲ್ಲಿ ಉಪಮೇಯರ್ ಮಧುಶ್ರೀ ಪೂಜಾರಿ ಭಾಗಿಯಾಗಿ ನಾಡವಿರೋಧಿ ಕಾರ್ಯಮಾಡಿದ್ದಾರೆ

ಮಧುಶ್ರೀ ಪೂಜಾರಿ ಬೆಳಗಾವಿ ಮಹಾನಗರ ಪಾಲಿಕೆ ಉಪಮೇಯರ್.ರಾಜ್ಯೋತ್ಸವಕ್ಕೆ ವಿರುದ್ಧ ನಡೆಯುತ್ತಿರೋ ಕರಾಳ ದಿನ ಆಚರಣೆಯಲ್ಲಿ ಭಾಗವಹಿಸಿ ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ

ಕರ್ನಾಟಕ‌ ರಾಜ್ಯೋತ್ಸವದ ದಿನದಂದು ಬೆರಳಣಿಕೆಯ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡರು‌ ನಡೆಸುವ ಕರಾಳ ದಿನಾಚಾರಣೆಯಲ್ಲಿ ಅಂದರ್ ಕೀ ಬಾತ್ ಹೈ ಪೊಲೀಸ್ ಹಮಾರೆ‌ ಸಾಥ್ ಹೈ ( ಒಳಗಿನ ಮಾತು ಪೊಲೀಸ್ ರು ನಮ್ಮ ಜತೆಗೆಗಿದ್ದಾರೆ) ಎಂದು ಮೆರವಣಿಗೆಯಲ್ಲಿ ಪುಂಡಾಟಿಕೆ ಮೆರೆದರು.
ಸದಾ ನಾಡವಿರೋಧಿ ಚಟುವಟಿಕೆನ್ನು ನಡೆಸಿಕೊಂಡು ಬರುವ ಎಂಇಎಸ್ ಕನ್ನಡಿಗರು ಆಚರಿಸುವ ರಾಜ್ಯೋತ್ಸವದ ವಿರುದ್ದವಾಗಿ ಕರಾಳ ದಿನಾಚಾರಣೆಯಲ್ಲಿ ರಾಜ್ಯ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಬೆಳಗಾವಿ ಎಂದೇದಿಗೂ ಮಹಾರಾಷ್ಟ್ರ ಕ್ಕೆ ಸೇರಬೇಕು. ಎಂಬ ಕಪ್ಪು ಬಣ್ಣದ ಟೀ ಷಟ್೯ ಧರಿಸಿ ಮಹಾರಾಷ್ಟ್ರ ಪರ ಘೋಷಣೆ ಕೂಗಿದರು. ಮಹಾನಗರ ಪಾಲಿಕೆಯ ಉಪಮೇಯರ್ ಮಧುಶ್ರೀ ಪೂಜಾರಿ, ಮಾಜಿ ಮೇಯರ್ ಸರೀತಾ ಪಾಟೀಲ, ವಿಕಾಸ ಕಲಘಟಗಿ ಸೇರಿದಂತೆ ಮೊದಲಾದವರು ಹಾಜರಿದ್ದರು

Check Also

ವಿವೇಕರಾವ್ ಪಾಟೀಲ ಇಂದು ಬಿಜೆಪಿಗೆ ಸೇರ್ಪಡೆ…!!

ಬೆಳಗಾವಿ- ಪ್ರತಾಪ್ ರಾವ್ ಪಾಟೀಲ್ ಚಿಕ್ಕೋಡಿ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಬೆನ್ನಲ್ಲಿಯೇ ನಿರೀಕ್ಷೆಯಂತೆ ಇಂದು ಹುಕ್ಕೇರಿಯಲ್ಲಿ ಅಮೀತ್ ಶಾ …

Leave a Reply

Your email address will not be published. Required fields are marked *