ಬೆಳಗಾವಿ
ಪೌರ ಕಾರ್ಮಿಕರಿಗೆ ಕಳೆದ ಎರಡು ವರ್ಷದಿಂದ ಪೌರ ಕಾರ್ಮಿಕರ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ. ಈ ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಕುಡಚಿ ಶಾಸಕ ಪಿ.ರಾಜೀವ ಪ್ರಶ್ನಿಸಿದರು.
ಶನಿವಾರ ಜಿಪಂ ಕೆಡಿಪಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಪೌರ ಕಾರ್ಮಿಕರು ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ಈಗಾಗಲೇ ಪೌರಕಾರ್ಮಿಕರ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲಿಯೇ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದುಭರವಸೆ ನೀಡಿದರು.
ಶಾಸಕಿ ಜೊಲ್ಲೆ ಮಾತನಾಡಿ, ನಾಲ್ಕು ವರ್ಷದಿಂದ ಕೆಡಿಪಿ ಸಭೆ ಕರೆದು ಇಲ್ಲಿ ತೆಗೆದುಕೊಳ್ಳುವ ನಿರ್ಣಯ ಸರಿಯಾಗಿ ಪಾಲನೆಯಾಗುತ್ತಿಲ್ಲ. ಹೀಗಾದರೇ ಶಾಸಕರಾಗಿ ಸಭೆಗೆ ಬರುವುದಾದರೂ ಏಕೆ ? ಹೀಗಾದರೆ ನಮ್ಮ ದಾರಿ ನಮಗೆ ನಿಮ್ಮದಾರಿ ನೀಮಗೆ ಎಂದು ಖಾರವಾಗಿ ನುಡಿದರು.
ನಾಲ್ಕು ವರ್ಷದಿಂದ ನನ್ನ ಕ್ಷೇತ್ರದಲ್ಲಿ ಸರಿಯಾಗಿ ಕೆಲಸವಾಗಿಲ್ಲ. ನನ್ನ ಅನುದಾನದಲ್ಲಿ ಬೇರೆಯವರ ಕ್ಷೇತ್ರದಲ್ಲಿ ಕಾಮಗಾರಿ ಮಾಡಿರುತ್ತಾರೆ. ಹೀಗಾದರೆ ನಾವೇಕೆ ಸಭೆಗೆ ಬರಬೇಕು. ತಪ್ಪಿತಸ್ಥತ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಸಭೆಯಲ್ಲಿ ಆಗ್ರಹಿಸಿದರು.
ಡೊಣ್ಣೆವಾಡಿ ಗ್ರಾಮದ ಸಮುದಾಯದ ಭವನದ ಉದ್ಘಾಟನೆಯಾಗಿದೆ. ಕಾಡ್೯ಗಳನ್ನು ಮುದ್ರಿಸಲಾಗಿದೆ. ಇದು ನನ್ನ ಗಮನಕ್ಕೆ ಬಂದೇ ಇಲ್ಲ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ಪಿ.ರಾಜೀವ ಹಾಗೂ ದುರ್ಯೋಧನ ಐಹೋಳೆ.ಇದು ಕೇವಲ ನಿಪ್ಪಾಣಿ ಕ್ಷೇತ್ರದ ಸಮಸ್ಯೆಯಲ್ಲ. ಎಲ್ಲ ಕಡೆ ಇದೆ ಸಮಸ್ಯೆ ಇದೆ. ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಅವರ ಮೇಲೆ ಕ್ರಮ ಆಗಲೇಬೇಕು ಎಂದು ಪಟ್ಟು ಹಿಡಿದರು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ಕೆಡಿಪಿ ಸಭೆ ಮುಗಿದ ಬಳಿಕ ವಿಶೇಷ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ಪ್ರಾಥಮಿಕ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹಣ ಮೀಸಲಿಟ್ಡಿರುವ ಕ್ರೀಯಾ ಯೋಜನೆಗೆ ಮಂಜೂರು ಮಾಡಿಕೊಟ್ಟಿದ್ದಾರೆ. ನಮ್ಮ ವ್ಯಾಪ್ತಿಯ ಶಾಲೆಗಳ ದುಸ್ಥಿಯ ಫೋಟೋ ತೋರಿಸದ ಮೇಲೆ ಅನುದಾನ ನೀಡಿದ್ದಾರೆ. ಯಾವ ಆಧಾರದ ಮೇಲೆ ಸರಕಾರದ ಅನುದಾನವನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಶಾಸಕರ ಒಪ್ಪಂದದ ಮೇರಿಗೆ ಚಿಕ್ಕೋಡಿ ಹಾಗೂ ಬೆಳಗಾವಿ ಡಿಡಿಪಿಐ ಜಿಪಂ ಶಿಕ್ಷಣ ಸ್ಥಾಯಿ ಸಮಿತಿಯ ಸಭೆಯಲ್ಲಿ ವಿಷಯ ಮಂಡಣೆ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಸರಕಾರದ ಮುಖ್ಯ ಸಚೇತಕ ಗಣೇಶ ಹುಕ್ಕೇರಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಸತೀಶ ಜಾರಕಿಹೊಳಿ, ಮಹೇಶ ಕಮಠೋಳಿ, ಶ್ರೀಮಂತ ಪಾಟೀಲ, ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಜಿಪಂ ಅಧ್ಯಕ್ಷೆ ಆಶಾ ಐಹೊಳಿ, ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಳ್ಳಿ, ಜಿಪಂ ಸಿಇಒ ರಾಮಚಂದ್ರನ್ ಆರ್. ಡಿಸಿಪಿ ಸೀಮಾ ಲಾಟ್ಕರ್, ಎಸ್ಪಿ ಸುಧೀರಕುಮಾರ ರೆಡ್ಡಿ ಸೇರಿದಂತೆ ಮೊದಲಾದವರು ಹಾಜರಿದ್ದರು.