ಬೆಳಗಾವಿ ಡಿಹೆಚ್ಓ ನೀರಿಳಿಸಿದ ಮಿನಿಸ್ಟರ್….
ಬೆಳಗಾವಿ- ದೀರ್ಘಾವಧಿಯ ಬಳಿಕ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕೆಡಿಪಿ ಸಭೆ ನಡೆಯುತ್ತಿದೆ ಈ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದು ,ಜಿಲ್ಲಾ ಉಸ್ತುವಾರಿ ಸಚಿವ ಬೆಳಗಾವಿ ಡಿಹೆಚ್ಓ ಮುನ್ಯಾಳ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಡಿಪಿ ಸಭೆಯಲ್ಲಿ ರಾಮದುರ್ಗ ದಡಾರ ಲಸಿಕೆಯಿಂದ ಮೂರು ಜನ ಮಕ್ಕಳ ಸಾವಿನ ಕುರಿತು ಚರ್ಚೆ ನಡೆಯಿತು,ಈ ಪ್ರಕರಣದ ಕುರಿತು ಇನ್ನುವರೆಗೆ ವರದಿ ಬಂದಿಲ್ಲ,ಸಮಂಧಿಸಿದ ಡಾಕ್ಟರ್ ಮೇಲೆ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವೀಂದ್ ಕಾರಜೋಳ ಅವರು ಡಿಹೆಚ್ಓ ವಿರುದ್ಧ ಗರಂ ಆದ್ರು….
ಇದೇ ಸಂಧರ್ಬದಲ್ಲಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಣದೀಪ್ ಸಿಂಗ್ ಅವರಿಗೆ ಕಾಲ್ ಮಾಡಿದ ಸಚಿವ ಕಾರಜೋ, ರಣದೀಪ ಅವರೇ ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು ಇಲ್ಲಿಯ ಡಿಹೆಚ್ಓ ಮುನ್ಯಾಳ ಸರಿಯಾಗಿ ಕೆಲಸ ಮಾಡುತ್ತಿಲ್ಲ,ಯಾವುದೇ ಮಾಹಿತಿ ಕೇಳಿದ್ರೂ ಕೊಡುತ್ತಿಲ್ಲ,ಅತ್ಯಂತ ಬೇಜವಾಬ್ದಾರಿಯಾಗಿ ಕೆಲಸ ಮಾಡುತ್ತಿದ್ದು ಇವರನ್ನು ತಕ್ಷಣ ಬೆಳಗಾವಿ ಜಿಲ್ಲೆಯಿಂದ ರಿಲೀವ್ ಮಾಡಿ,ದೊಡ್ಡ ಜಿಲ್ಲೆಗೆ ಕ್ರಿಯಾಶಿಲ ಅಧಿಕಾರಿಯನ್ನು ನಿಯುಕ್ತಿಗೊಳಿಸಿ ಎಂದು ಆದೇಶಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂಧಿಗಳನ್ನು ವಿನಾಕಾರಣ ವರ್ಗಾವಣೆ ಮಾಡಲಾಗುತ್ತಿದೆ.ಕೋವೀಡ್ ಸಂಧರ್ಭದಲ್ಲಿ ಸೇವೆ ಮಾಡಿದ ನರ್ಸ ಗಳನ್ನು ಹುದ್ದೆ ಖಾಲಿ ಇದ್ದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿಯೋಜನೆ ಮಾಡಬೇಕಿತ್ತು ಅದನ್ನೂ ಮಾಡಲಿಲ್ಲ ಎಂದು ಸಚಿವ ಕಾರಜೋಳ ಜಿಲ್ಲಾ ಆರೋಗ್ಯಾಧಿಕಾರಿ ಮುನ್ಯಾಳ ಅವರನ್ನು ತರಾಟೆಗೆ ತೆಗೆದುಕೊಂಡರು.