ಬೆಳಗಾವಿ- ಬೆಳಗಾವಿ ನಗರದ ಖಂಜರ್ ಗಲ್ಲಿಯಲ್ಲಿನ ಗುಜ್ಜರಿ ಅಂಗಡಿಗಳನ್ನು ತೆರವು ಮಾಡಿ ನಂತರ ಉದ್ಭವಿಸಿದ ನಕಲಿ ಗೋರಿಯನ್ನು ತೆಗೆದು ಬರೊಬ್ಬರಿ ಎರಡು ವರ್ಷಗಳು ಗತಿಸಿವೆ ಆದರೂ ಪಾಲಿಕೆ ಅಧಿಕಾರಿಗಳು ಈ ಸ್ಥಳದಲ್ಲಿ ಪಾರ್ಕಿಂಗ್ ಶುರು ಮಾಡದೇ ಇರುವದರಿಂದ ಗುಜ್ಜರಿ ವ್ಯಾಪಾರಿಗಳು ಪಾರ್ಕಿಂಗ್ ಸ್ಥಳವನ್ನು ಆಕ್ರಮಿಸಿಕೊಂಡಿದ್ದಾರೆ
ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ವಿಷಯದಲ್ಲಿ ಯಾರ ಮರ್ಜಿ ಕಾಯುತ್ತಿದ್ದಾರೆ ಗೊತ್ತಿಲ್ಲ ಖಂಜರ ಗಲ್ಲಿಯ ಪಾರ್ಕಿಂಗ್ ಸ್ಥಳ ಈಗ ಬೇ ವಾರಸಾ ಅಂದ್ರೆ ನಿರ್ಗತಿಕವಾಗಿದೆ
ಎರಡು ವರ್ಷದ ಹಿಂದೆ ಖಂಜರ್ ಗಲ್ಲಿಯಲ್ಲಿನ ಗುಜ್ಜರಿ ಅಂಗಡಿಗಳನ್ನು ತೆರವು ಮಾಡಲಾಯಿತು ನಂತರ ಇಲ್ಲಿ ನಕಲಿ ಗೋರಿಯ ವಿವಾದ ಆರಂಭವಾಗಿ ವಿವಾದ ಇತ್ಯರ್ಥವಾಗಿ ಖಂಜರ್ ಗಲ್ಲಿಯ ಪಾರ್ಕಿಂಗ್ ಸ್ಥಳ ವಿವಾದದಿಂದ ಮುಕ್ತ ವಾದರೂ ಪಾಲಿಕೆ ಅಧಿಕಾರಿಗಳು ಇನ್ನುವರೆಗೆ ಕ್ಯಾರೆ ಎನ್ನುತ್ತಿಲ್ಲ
ಬೆಳಗಾವಿ ನಗರದ ಮುಖ್ಯ ಮಾರುಕಟ್ಟೆ ಪ್ರದೇಶ ವಾಗಿರುವ ಖಡೇಬಝಾರ್,ಗಣಪತಿಗಲ್ಲಿ, ಮಾರುತಿಗಲ್ಲಿ,ಹಾಗು ಕಚೇರಿ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಬೈಕ್ ಗಳನ್ನು ಪಾರ್ಕ ಮಾಡಲಾಗುತ್ತಿದೆ ಇಲ್ಲಿ ಬೀದಿ ವ್ಯಾಪಾರಿಗಳ,ತಳ್ಳುವ ಗಾಡಿಗಳ ಹಾವಳಿ ಹೆಚ್ಚಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಪಾಲಿಕೆ ಅಧಿಕಾರಿಗಳು ಖಂಜರ್ ಗಲ್ಲಿಯ ಪಾರ್ಕಿಂಗ್ ಆರಂಭಿಸುವದು ಅತ್ಯಗತ್ಯವಾಗಿದೆ
ಖಂಜರ್ ಗಲ್ಲಿಯ ಪಾರ್ಕಿಂಗ್ ಆರಂಭವಾದರೆ ಖಡೇಬಝಾರ್, ಗಣಪತಿಗಲ್ಲಿ,ಮಾರುತಿಗಲ್ಲಿ,ಹಾಗು ಕಚೇರಿ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧಿಸಲು ಸಾಧ್ಯವಿದೆ ಅದಕ್ಕಾಗಿ ಈಬಗ್ಗೆ ಪಾಲಿಕೆ ಆಯುಕ್ತರು ಕ್ರಮ ಜರುಗಿಸಲಿ ಅನ್ನೋದು ನಮ್ಮ ಒತ್ತಾಯ