Breaking News

ಕೆಎಲ್ಇ ಸಂಸ್ಥೆಯ ಆರೋಗ್ಯ ಸೇವೆಗೆ ಜಾಗತಿಕ ಮೆಚ್ಚುಗೆ

 

ಬೆಳಗಾವಿ- ಆರೋಗ್ಯ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆ ಮಾಡುವ ಮೂಲಕ ಜಾಗತಿಕ ಮಟ್ಟದ ಪ್ರಶಂಸೆಗೆ ಪಾತ್ರವಾಗಿರುವ ಬೆಳಗಾವಿಯ ಕೆಎಲ್ಇ ಸಂಸ್ಥೆ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೊಸ ಸಂಶೋಧನೆ ಮಾಡಿದೆ ತಾಯಿ ಮತ್ತು ಶಿಶು ಮರಣಕ್ಕೆ ಕಾರಣ ಏನು? ಅದನ್ನು ಹೇಗೆ ತಡೆಗಟ್ಟಬಹುದು ಎಂದು ಪುಸ್ತಕವೊಂದನ್ನು ಸಿದ್ಧ ಪಡಿಸಲಾಗಿದ್ದು ಕೇಂದ್ರ ಸಚಿವ ಹರ್ಷವರ್ದನ್ ಇಂದು ಈ ಪುಸ್ತಕವನ್ನು ಬಿಡುಗಡೆ ಮಾಡಿದರು

ಹತ್ತು ಹಲವು ದೇಶಗಳ ಪ್ರತಿನಿಧಿಗಳು ಆರೋಗ್ಯ ಕ್ಷೇತ್ರದ ಸಂಶೋದಕರು ಕೆಎಲ್ಇ ಸಂಸ್ಥೆಯ ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು ಆರೋಗ್ಯ ಕ್ಷೇತ್ರದಲ್ಲಿ ಕೆಎಲ್ಇ ಸಂಸ್ಥೆ ಮಾಡುತ್ತಿರುವ ಸೇವೆಯನ್ನು ಕೊಂಡಾಡಿದರು

ತಾಯಿ ಮತ್ತು ಶಿಶು ಮರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದನ್ನ ತಡೆಯುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇತ್ತ ಹೆರಿಗೆ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ ತಾಯಿ ಮತ್ತು ಶಿಶು ಮರಣ ಹೊಂದುತ್ತಿದೆ ಎಂಬುದರ ಕುರಿತು ಸಂಶೋಧನೆ ನಡೆಸಿರುವ ಕೆಎಲ್ಇ ಸಂಸ್ಥೆ ಈ ಕುರಿತು ಪುಸ್ತಕವನ್ನ ಹೊರ ತಂದಿದೆ.

ಇಂದು ಬೆಳಗಾವಿಯ ಕೆಎಲ್ಇ ಸಂಸ್ಥೆಯ ಜೆಎನ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ತಾಯಿ ಮತ್ತು ನವಜಾತ ಶಿಶುಗಳ ಆರೋಗ್ಯದ ಕುರಿತು ಎರಡನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು. ಇತತ ಎರಡು ದಿನಗಳ ಕಾಲ ನಡೆಯುತ್ತಿರುವ ಈ ಕಾರ್ಯಕ್ರಮವನ್ನ ಕೇಂದ್ರ ವಿಜ್ನಾನ ಮತ್ತು ತಂತ್ರಜ್ನಾನ ಸಚಿವ ಡಾ.ಹರ್ಷವರ್ದನ್ ಉದ್ಘಾಟಿಸಿದರು. ಈ ಸಮ್ಮೇಳನದಲ್ಲಿ 22ರಾಷ್ಟ್ರಗಳಿಂದ 80ಕ್ಕೂ ಅಧಿಕ ಸಂಶೋಧಕರು ಭಾಗವಹಿಸಿದ್ದಾರೆ.

ಕೆಎಲ್ಇ ಕಾರ್ಯಸಾಧನೆ ಬಗ್ಗೆ ಕೊಂಡಾಡಿದ ಸಚಿವರು ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನ ಕೇಂದ್ರ ಸರ್ಕಾರ ತೋರುತ್ತಿದ್ದು ಒಳ್ಳೆಯ ಪೌಷ್ಟಿಕ ಆಹಾರ ನೀಡುವುದರ ಜೊತೆಗೆ ಮರಣ ಪ್ರಮಾಣ ಕೂಡ ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ

Check Also

ಆಸ್ಪತ್ರೆ ಉದ್ಘಾಟನೆ ಮಾಡಿ,ಡೆಸ್ಕ್ ಖರೀಧಿ ಮಾಡಿ,ಡೆಂಗ್ಯು ಕಂಟ್ರೋಲ್ ಮಾಡಿ….!!

  ಚಿಕ್ಕೋಡಿ‌ ತಾಯಿ ಮಕ್ಕಳ ಆಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಕ್ರಮ‌ ಜರುಗಿಸಿ: ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ- ಜು.12: ಚಿಕ್ಕೋಡಿಯಲ್ಲಿ …

Leave a Reply

Your email address will not be published. Required fields are marked *