ಬೆಳಗಾವಿ-ಸಹ್ಯಾದ್ರಿಯ ಮಡಿಲಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ನೆರೆಯ ಮಹಾರಾಷ್ಟ್ರದ ನದಿಗಳು ಊಕ್ಕಿ ಹರಿಯುತ್ತಿವೆ.ಮಹಾರಾಷ್ಟ್ರದ ಕೋಯ್ನಾ ಜಲಾಶಯ ಭರ್ತಿಯಾಗಿದ್ದು ಶನಿವಾರ ಮಧ್ಯಾಹ್ನದವರೆ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುವ ಸಾಧ್ಯತೆಗಳಿವೆ.ಎಂದು ನಂಬಲರ್ಹ ಮೂಲಗಳು ತಿಳಿಸಿವೆ
ಬೆಳಗಾವಿ ಜಿಲ್ಲೆಯ ಕೃಷ್ಣಾ,ವೇದಗಂಗಾ,ದೂದಗಂಗಾ, ನದಿಗಳ ಒಳ ಹರಿವು ಹೆಚ್ಚಾಗಿದೆ.ಕೃಷ್ಣಾ ನದಿಯಲ್ಲಿ 1ಲಕ್ಷ 52 ಸಾವಿರ ಕ್ಯುಸೆಕ್ಸ ನೀರು ಹರಿದು ಬರುತ್ತಿದೆ.ಹೀಗಾಗಿ ಚಿಕ್ಕೋಡಿ ತಾಲೂಕಿನ 7 ಸೇತುವೆಗಳು ಹಾಗು ರಾಯಬಾಗ ತಾಲೂಕಿನ ಎರಡು ಸೇತುವೆಗಳು ಮುಳುಗಡಯಾಗಿದ್ದು ಜಮಖಂಡಿ-ಮೀರಜ್ ಹೆದ್ದಾರಿ ರಸ್ತೆ ಸಂಚಾರ ಬಂದ್ ಆಗಿದೆ
ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆಯಾದರೆ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಲಿದೆ.ನದಿಪಾತ್ರದ ಗ್ರಾಮಗಳಿ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ನಿಷೆದಾದೆÐóó ಜಾರಿ ಮಾಡಲಾಗಿದೆ.
