ಮೆಹಬೂಬ ಮಕಾನದಾರ
ಬೆಳಗಾವಿ:
ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿ ವೀರ ರಾಣಿ ಕಿತ್ತೂರು ಚನ್ನಮ್ಮಾಜಿಯ ಸಮಾದಿ ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿರುವ ಐತಿಹಾಸಿಕ ಸಮಾದಿ ಹಂದಿ ನಾಯಿಗಳ ತಾಣವಾಗಿದ್ದು, ದೇಶ ರಕ್ಷಣೆಗಾಗಿ ಹೋರಾಡಿದ ವೀರ ಮಹಿಳೆಯ ಸಮಾಧಿ ಅನಾಥವಾಗಿದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಸಮರ ಸಾರಿ ನಿನನಗೇಕೆ ಕೊಡಬೇಕು ಕಪ್ಪ ಎಂದು ಕೆಂಪ ಮುಂಗೋಸಿಗಳಿಗೆ ಪ್ರಶ್ನಿಸಿ ಹೋರಾಟದ ಇತಿಹಾಸವನ್ನು ನಿರ್ಮಿಸಿದ್ದ ವೀರ ರಾಣಿಯ ಸಮಾಧಿ ಸ್ಥಳ ಸಂಪೂರ್ಣ ನಿರ್ಗತಿಕವಾಗಿದ್ದರೂ ಈ ಕಡೆ ಇಲ್ಲಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸದೇ ಇರುವುದು ದುರ್ಧೈವದ ಸಂಗತಿಯಾಗಿದೆ.
ಎರಡು ವರ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೈಲಹೊಂಗಲದಲ್ಲಿರುವ ಚನ್ನಮ್ಮಾಜಿಯ ಸಮಾಧಿಯ ಅಭಿವೃದ್ಧಿಗೆ 25 ಲಕ್ಷ ರು. ಅನುಧಾನ ನೀಡುವುದಾಗಿ ಬಜೇಟ್‍ನಲ್ಲಿ ಘೋಷಿಸಿದ್ದರೂ ಸಹ ಇಲ್ಲಿಯ ಜನಪ್ರತಿನಿಧಿಗಳು ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಲ್ಲಿ ಅನುದಾನ ತರುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಶನಿವಾರ ಕಿತ್ತೂರಿನಲ್ಲಿ ಕಿತ್ತೂರು ಅಭಿವೃÀದ್ಧಿ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಸಚಿವರು ಚನ್ನಮಾಜಿಯ ಸಮಾಧಿಯ ಅಭಿವೃದ್ಧಿ ಬಗ್ಗೆ ಗಮನ ಹರಿಸಲಿ ಎನ್ನುವುದು ಚನ್ನಮ್ಮಾಜಿಯ ಅಭಿಮಾನಿಗಳ ಒತ್ತಾಯವಾಗಿದೆ.
Check Also
ಯು.ಟಿ ಖಾದರ್ ಹೊಸ ಇತಿಹಾದ, ಬೆಳಗಾವಿ ಸುವರ್ಣಸೌಧದೊಳಗೆ “ಅನುಭವ ಮಂಟಪ.
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ, ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ ಮತ್ತೊಂದು …