ಬೆಳಗಾವಿ- ಕರ್ನಾಟಕ ಸರ್ಕಾರ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು,ಈ ಪ್ರಾಧಿಕಾರವನ್ನು ಸ್ವಾಗತಿಸಿ,ಸರ್ಕಾರವನ್ನು ಅಭಿನಂಧಿಸಿದಚ ಮರಾಠಿ ಫಲಕಗಳು ಈಗ ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿವೆ.
ಬೆಳಗಾವಿಯಲ್ಲಿ ಸರ್ಕಾರದ ಕ್ರಮವನ್ನು ಸ್ವಾಗತಿಸಿ,ಸರ್ಕಾರವನ್ನು ಅಭಿನಂಧಿಸಿ ,ಅಲ್ಲಲ್ಲಿ,ಮರಾಠಿ ಭಾಷೆಯಲ್ಲೇ ಅಭಿನಂದನಾ ಫಲಕಗಳನ್ನು ಹಾಕಲಾಗಿದ್ದು ,ಈ ಫಲಕಗಳೇ ಈಗ ಕನ್ನಡ ಅಭಿಮಾನಿಗಳಿಗೆ ಟಾರ್ಗೆಟ್ ಆಗಿವೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಶಾಸಕ ಅಭಯ ಪಾಟೀಲ,ಶಾಸಕ ಅನೀಲ ಬೆನಕೆ ಅವರ ಭಾವಚಿತ್ರ ಹಾಕಿ ,ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿದ ಸರ್ಕಾರಕ್ಕೆ ಅಭಿನಂಧಿಸಿದ್ದಾರೆ,ಈ ಎಲ್ಲ ಫಲಕಗಳು ಮರಾಠಿ ಭಾಷೆಯಲ್ಲೇ ಇರುವದರಿಂದ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಮರಾಠಿ ಭಾಷೆಯಲ್ಲಿರುವ ಅಭಿನಂಧನಾ ಫಲಕಗಳಿಗೆ ಕಪ್ಪು ಮಸಿ ಬಳಿದು ಆಕ್ರೋಶ ,ವ್ಯೆಕ್ತ ಪಡಿಸಿದ್ದಾರೆ.