ಬೆಳಗಾವಿಯ ಅಂಗಡಿಗಳ ಮೇಲೆ ಅಧಿಕಾರಿಗಳ ಅಟ್ಯಾಕ್….

ಬೆಳಗಾವಿ- ‌ಬೆಳಗಾವಿ ನಗರ ಪ್ರದೇಶದಲ್ಲಿರುವ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ತಂಡ ಅನಿರೀಕ್ಷಿತವಾಗಿ ದಾಳಿ ಮಾಡಿ ಮೂವರು ಬಾಲ ಕಾರ್ಮಿಕರನ್ನು ಪತ್ತೆ ಮಾಡಿದ್ದಾರೆ.

ಬೆಳಗಾವಿಯ ವಿವಿಧ ಅಂಗಡಿ, ಹೋಟೇಲ, ವಾಣಿಜ್ಯ ಸಂಸ್ಥೆಗಳು, ಬಾರ್ ಹಾಗೂ ರೆಸ್ಟೋರೆಂಟ್‌ಗಳಿಗೆ
ಅನಿರೀಕ್ಷಿತವಾಗಿ ಭೇಟಿ ನೀಡಿ ಕಪಾಸಣೆ ಮಾಡಿದ ಅಧಿಕಾರಿಗಳು ತಪಾಸಣಾ ಸಮಯ ಸಂಸ್ಥೆಯಲ್ಲಿರುವ ಮಾಲೀಕರಿಗೆ ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳದಂತೆ, ತಿಳುವಳಿಕೆ ಹೇಳಿ ಭಿತ್ತಿ ಪತ್ರಗಳನ್ನು ಸಂಸ್ಥೆಯಲ್ಲಿ ಅಂಟಿಸಿದರು.

ತಂಡದಲ್ಲಿ
ಕಾರ್ಮಿಕ ಅಧಿಕಾರಿಗಳಾದ ಶ್ರೀಮತಿ ಶರನ್ನು ಬೆಂಗಾಲಿ ಮತ್ತು ಎ.ಜಿ.ಬಾಳಿಗಟ್ಟಿ ಹಾಜರಿದ್ದರು ಹಾಗೂ ಹಿರಿಯ
ಕಾರ್ಮಿಕ ನಿರೀಕ್ಷಕರುಗಳು 1,2,3 ನೇ ವೃತ್ತ, ಮಕ್ಕಳ ಸಹಾಯವಾಣಿ ಸಿಬ್ಬಂದಿ, ಪೋಲಿಸ ಇಲಾಖೆ, ಶೈಕ್ಷಣಿಕ ಇಲಾಖೆಯ ಸಿಬ್ಬಂದಿ ಬಾಲ ಕಾರ್ಮಿಕ ಯೋಜನಾ ನಿರ್ದೇಶಕರು ,ಟೈಡ್ ಲೈನ್ ಸಿಬ್ಬಂದಿ ಹಾಜರಿದ್ದರು.

ತಪಾಸಣಾ ಸಮಯ ಮೂರು ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲಾಯಿತು. ಸದರಿ ಬಾಲ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಪುನರ್ವಸತಿ ಗಾಗಿ ಬಾಲಕರ ಬಾಲ ಭವನ ಬೆಳಗಾವಿ ಇಲ್ಲಿಗೆ ಸೇರಿಸಲಾಗಿದೆ.

ಇವತ್ತು ಕಚೇರಿ ಬಿಟ್ಟು ಹೊರಗಡೆ ಬಂದಿರುವ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮೂವರು ಬಾಲ ಕಾರ್ಮಿಕರನ್ನು ಬಚಾವ್ ಮಾಡಿದ್ದಾರೆ.

Check Also

ಬೈಕ್ ಮೇಲೆ ಹೋಗುವಾಗ ಹಣಕಾಸಿನ ಜಗಳ ಕೊಲೆಯಲ್ಲಿ ಅಂತ್ಯ

ಯಮಕನಮರ್ಡಿ- ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಅಂಕಲಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ …

Leave a Reply

Your email address will not be published. Required fields are marked *