ಬೆಳಗಾವಿ-ಬೆಳಗಾವಿ: ಇಲ್ಲಿನ ಗಾಲ್ಫ್ ಮೈದಾನ ಕ್ಕೆನುಗ್ಗಿದ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಮಂಗಳವಾರವೂ ಕಾರ್ಯಾಚರಣೆ ಆರಂಭಿಸಿತು. ಇಬ್ಬರು ಶಾರ್ಪ್ ಶೂಟರ್ ಗಳು ಬಂದಿದ್ದಾರೆ. ಅಲ್ಲದೆ ಚಿರತೆಯ ಚಲನ-ವಲನ ಸೆರೆಹಿಡಿಯಕು ಕ್ವಾಡ್ ಕ್ಯಾಮೆರಾ ಬಳಸಲಾಗುತ್ತಿದೆ.
ಆದರೆ, ಚಿರತೆ ನುಗ್ಗಿರುವುದು ರಕ್ಷಣಾ ಇಲಾಖೆ ಪ್ರದೇಶಕ್ಕೆ. ಇಲ್ಲಿ ಕ್ವಾಡ್ ಕ್ಯಾಪ್ಟರ್ ಕ್ಯಾಮರಾ ಬಳಸುವುದಕ್ಕೆ ರಕ್ಷಣಾ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಇದು ತಕ್ಷಣಕ್ಕೆ ಸಿಗುವುದು ಅನುಮಾನವಾಗಿದೆ.ಇದರಿಂದಲೂ ಕಾರ್ಯಾಚರಣೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಕಾರ್ಯಾಚರಣೆ ಹಿನ್ನೆಲೆಯಲ್ಲಿ ಶಾಸಕ ಅನಿಲ ಬೆನಕೆ, ಸಿಸಿಎಫ್ ಮಂಜುನಾಥ ಹಾಗೂ ನೂರಾರು ಅಧಿಕಾರಿಗಳು, ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಆದರೆ, ಅದು ಸಿಗುತ್ತಿಲ್ಲ. ಇದು ಜನರ ಆತಂಕಕ್ಕೆ ಸಹ ಕಾರಣವಾಗಿಬಿಟ್ಟಿದೆ.
ಕ್ವಾಡ್ ಕ್ಯಾಪ್ಟರ್ ಹೈ ಸೆನ್ಸಾರ್ ಇರುವ ಎರಡು ಹೈಟೆಕ್ ದ್ರೋಣ ಕ್ಯಾಮರಾಗಳನ್ನು ಬೆಂಗಳೂರಿನಿಂದ ತರಿಸಲಾಗಿದೆ. ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಅಡಗಿದೆ,ಈ ಏರಿಯಾ ರೆಡ್ ಝೋನ್ ದಲ್ಲಿ ಬರುತ್ತದೆ.ಈ ಪ್ರದೇಶದಲ್ಲಿ ದ್ರೋಣ ಕ್ಯಾಮರಾ ಹಾರಿಸಲು ಕೇಂದ್ರದ ರಕ್ಷಣಾ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ, ಅನುಮತಿ ಪಡೆಯಲು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಎರಡೂ ಕ್ಯಾಮರಾಗಳನ್ನು ಬೆಂಗಳೂರಿನಿಂದ ತರಿಸಲಾಗಿದೆ.ಆದ್ರೂ ಹಾರಿಸಲು ಅನುಮತಿ ಬೇಕಾಗಿದೆ.
ಸಕ್ರೆಬೈಲ ಅರಣ್ಯದಿಂದ ಬೆಳಗಾವಿಗೆ ಹೊರಟ ಎರಡು ಆನೆಗಳು..
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅಡಗಿರುವ ಚಿರತೆ ಪತ್ತೆ ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲೆಯಿಂದ ಎರಡು ಆನೆಗಳನ್ನು ಬೆಳಗಾವಿಗೆ ತರಿಸಲಾಗುತ್ತಿದೆ.ಎರಡು ಲಾರಿಗಳಲ್ಲಿ ಎರಡು ಆನೆಗಳು ಬೆಳಗಾವಿಯತ್ತ ಪ್ರಯಾಣ ಬೆಳೆಸಿವೆ.ರಾತ್ರಿ ಹೊತ್ತಿಗೆ ಈ ಆನೆಗಳು ಬೆಳಗಾವಿಗೆ ತಲುಪಲಿವೆ.ನಾಳೆ ಬೆಳಗ್ಗೆಯಿಂದ ಆನೆಗಳ ಮೂಲಕ ಚಿರತೆ ಪತ್ತೆ ಕಾರ್ಯಾಚರಣೆ ನಡೆಲಿದೆ.