ಲವ್ ಮಾಡಿದ್ದೇವೆ ಮದುವೆ ಮಾಡಿಸಿ,ಇಲ್ಲದಿದ್ದರೆ ವಿಷ ಕುಡಿಯುತ್ತೇವೆ..

ಬೆಳಗಾವಿ- ಪ್ರೀತಿಸಿ ಮನೆ ಬಿಟ್ಟು ಓಡಿ ಬಂದ ಪ್ರೇಮಿಗಳಿಬ್ಬರು ರಕ್ಷಣೆ ಒದಗಿಸುವಂತೆ ಬೆಳಗಾವಿ ಪೊಲೀಸ್ ಕಮೀಶನರ್ ಮೊರೆ ಹೋಗಿದ್ದಾರೆ. ತಮಗೆ ನ್ಯಾಯ ಸಿಗದಿದ್ದರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳೊದಾಗಿ ವಿಷದ ಬಾಟಲಿ ಹಿಡಿದು ಪೊಲೀಸ್ ಕಮಿಷನರ್ ಕಚೇರಿ ಮೆಟ್ಟಿಲೇರಿದ್ದಾರೆ. ಗೋಕಾಕ್ ತಾಲೂಕಿನ ಗೋಡಚಿನಮಲ್ಕಿ ಗ್ರಾಮದ ಭಾರತಿ ಗುಡುಗನಟ್ಟಿ ಮತ್ತು ಬೆಳಗಾವಿ ಮೂಲದ ರಾಘವೇಂದ್ರ ಹಿರೇಮಠ್ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಆದ್ರೆ ಭಾರತಿ ಮನೆಯವ್ರು ಇವರ ಪ್ರೀತಿಗೆ ವಿರೋಧಿಸಿ ಭಾರತಿಯನ್ನ ಸೋದರ ಮಾವನಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಆದ್ರೆ ಭಾರತಿ ಮಾತ್ರ ತನಗೆ ಈ ಮದುವೆ ಇಷ್ಟ ಇಲ್ಲ. ತಾನು ರಾಘವೇಂದ್ರನನ್ನ ಪ್ರೀತಿಸುತ್ತಿರುವುದಾಗಿ ಮನೆಯವ್ರಿಗೆ ಹಾಗೂ ಮದುವೆ ಗಂಡಿಗೆ ಹೇಳಿದ್ರು ಕ್ಯಾರೆ ಅನ್ನದೇ ಒತ್ತಾಯಪೂರ್ವಕವಾಗಿ ಭಾರತಿ ಮದುವೆ ಮಾಡಿಸಲಾಗಿದೆ. ಒಲ್ಲದ ಮನಸ್ಸಿನಿಂದ ಮದುವೆಯಾದ ಭಾರತಿ ತನಗೆ ಗಂಡನೊಂದಿಗೆ ಬಾಳಲು ಇಷ್ಟ, ಹೇಗಾದ್ರು ಮಾಡಿ ತನ್ನನ್ನು ಕರೆದುಕೊಂಡು ಹೋಗು ಇಲ್ಲದಿದ್ದರೆ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳೊದಾಗಿ ರಾಘವೇಂದ್ರನಿಗೆ ಕರೆ ಮಾಡಿದ್ದಾಳೆ. ಇದಕ್ಕೆ ರಾಘವೇಂದ್ರ ನಿನ್ನ ಮದುವೆಯಾಗಿದೆ ನನ್ನ ಪ್ರೀತಿ ಮರೆತು ಚೆನ್ನಾಗಿರು ಅಂದಿದ್ದಾನೆ. ಅದಕ್ಕೆ ಒಪ್ಪದ ಭಾರತಿ ಕಳೆದ ನಾಲ್ಕು ದಿನಗಳ ಹಿಂದೆ ಪ್ರೀಯತಮ ರಾಘವೇಂದ್ರನ ಜೊತೆಗೆ ಗಂಡನ ಮನೆ ಬಿಟ್ಟು ಬಂದಿದ್ದಾಳೆ. ಸಧ್ಯ ಭಾರತಿ ಮನೆಯವ್ರು ರಾಘವೇಂದ್ರನ ವಿರುದ್ದ ಯಮಕನಮರ್ಡಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದು, ಅವರ ಮನೆಯವ್ರಿಗೆ ತೊಂದರೆ ನೀಡುತ್ತಿದ್ದಾರೆ. ದಯವಿಟ್ಟು ನಮಗೆ ನಮ್ಮಕುಟುಂಬದವ್ರಿಗೆ ರಕ್ಷಣೆ ನೀಡಿ ಅಂತ ಪ್ರೇಮಿಗಳಿಬ್ಬರು ಗೋಗರಿತಿದಾರೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *