Breaking News

ಮೊದಲು ಮಾತನಾಡಿದ್ದು ಸಫಾಟ್.ನಂತರ ಹೇಳಿದ್ದು ಬಾಯಿಪಾಠ್.ಆಮೇಲೆ ಆಗಿದ್ದು ಬೊಂಬಾಟ್..!!!!

 

ಬೆಳಗಾವಿ- ಕೆಪಿಸಿಸಿ ಮಹಿಳಾ ಘಟಕದ ಅದ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರು ನಾಡವಿರೋಧಿಗಳಿಗೆ ಬುದ್ಧಿ ಹೇಳಲು ಹೋಗಿ ಎಡವಟ್ಟು ಮಾಡಿಕೊಂಡಿರುವ ವಿಷಯ ಈಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ ಆದರೆ ಅವರು ನಿಜವಾಗಿಯೂ ಆ ದಿನ ಭಾಷಣ ಮಾಡಿದ್ದೇನು? ಎಡವಿದ್ದು ಎಲ್ಲಿ ಅನ್ನೋದನ್ನು ಖಾತ್ರಿ ಪಡಿಸಿಕೊಳ್ಳಬೇಕಾದರೆ ಅವರ ಈಡೀ ಭಾಷಣವನ್ನು ಕೇಳಲೇ ಬೇಕು ಲಕ್ಷ್ಮೀ ಹೆಬ್ಬಾಳಕರ ಅವರು ಎಂಈಸ್ ಬೆಂಬಲಿಗರಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾರೆ ಸ್ಪಷ್ಠವಾಗಿ ಮರಾಠಿ ಭಾಷೆ ಮಾತನಾಡಲು ಬಾರದೇ ಇದ್ದರೂ ಮರಾಠಿಯಲ್ಲಿ ಬುದ್ದಿ ಹೇಳಲು ಹೋಗಿ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ
ಅವರು ಮಾಡಿದ ಸಾರಾಂಶ ಹೀಗಿದೆ

ಬಸರೀಕಟ್ಟಿ ಗ್ರಾಮದ ಆತ್ಮೀಯ ಬಂಧುಗಳೇ ನೀವುನಿಜವಾಗಯೂ ಶ್ರಮಜೀವಿಗಳು ನಿರಂತರವಾಗಿ ಹೊಲಗದ್ದೆಯಲ್ಲಿ ಕೆಲಸ ಮಾಡ್ತೀರಾ ಗೌಂಡಿ ಕೆಲಸ ಮಾಡ್ತೀರಾ ನಿಮ್ಮ ಮಕ್ಕಳು ಡಾಕ್ಟರ್ ಆಗಬೇಕು ಇಂಜನೀಯರ್ ಆಗಬೇಕು ಅತ್ಯಂತ ಹಿಂದುಳಿದ ಬೆಳಗಾವಿ ಗ್ರಾಮೀಣ ಕ್ಷೇತ್ರ ಅಭಿವೃದ್ಧಿ ಆಗಬೇಕು ಎನ್ನುವ ಕನಸು ನನ್ನದು ಎಂಈಎಸ್ ನಾಯಕರು ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗುತ್ತದೆ ಎಂದು ಸುಳ್ಳು ಹೇಳಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಆದರೆ ಗಡಿ ವಿವಾದದ ಕುರಿತು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ದಾವೇ ಹೂಡಿದ್ದೇ ತಪ್ಪು ಮತ್ತು ಕಾನೂನು ಬಾಹಿರವಾಗಿದೆ ಈ ಕೇಸ್ ಸುಪ್ರೀಂವಚನ ಕೋರ್ಟ್ ನಲ್ಲಿ ಸ್ಟ್ಯಾಂಡ್ ಆಗಲು ಸಾಧ್ಯವೇ ಇಲ್ಲ ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗಲು ಸಾಧ್ಯವೇ ಇಲ್ಲ ಎಂಈಎಸ್ ನಾಯಕರು ನಿಮ್ಮನ್ನು ದಿಶಾಬೂಲು ಮಾಡುತ್ತಿದ್ದಾರೆ ಒಂದು ವೇಳೆ ಬೆಳಗಾವಿ ಮಹಾರಾಷ್ಟ್ರ ಕ್ಕೆ ಹೋಗುವ ನಿರ್ಣಯ ಆದಲ್ಲಿ ಮೊದಲು ನಾನೇ ಜೈ ಮಹಾರಾಷ್ಟ್ರ ಎನ್ನುತ್ತೇನೆ ಈ ರೀತಿ ಹೇಳುವ ಧೈರ್ಯ ಯಾರಿಗೂ ಇಲ್ಲ ಎಂದು ಹೆಬ್ಬಾಳಕರ ಹೇಳಿದ್ದಾರೆ

ಹೆಬ್ಬಾಳಕರ ನಾಡವಿರೋಧಿಗಳಿಗೆ ಬುದ್ದಿ ಹೇಳುವ ಪ್ರಯತ್ನ ಮಾಡಿದ್ದಾರೆ ಎಂಈಎಸ್ ಮುಖವಾಡವನ್ನು ಬಯಲಿಗೆಳೆಯುವ ಉದ್ದೇಶದಿಂದ ಎಂಈಎಸ್ ನಾಯಕರ ಮಾತುಗಳಿಗೆ ಕಿವಿಗೊಡಬೇಡಿ ಅವರು ಸುಳ್ಳು ಹೇಳುತ್ತಿದ್ದಾರೆ ಅವರು ಹೇಳಿದ ಮಾತು ನಿಜ ಇಲ್ಲ ಅದು ನಿಜವಾದಲ್ಲಿ ಅವರು ಮಾಡುವ ಕೆಲಸವನ್ನು ನಾನೇ ಮೊದಲು ಮಾಡುತ್ತೇನೆ ಎಂದು ಹೇಳಿದ್ದಾರೆ
ಬೆಳಗಾವಿ ಮಹಾರಾಷ್ಟ್ರಕ್ಕೆ ಹೋದರೆ ನಾನೇ ಮೊದಲು ಜೈ ಮಹಾರಾಷ್ಟ್ರ ಎಂದು ಹೇಳುತ್ತೇನೆ ಎಂದು ಹೇಳಿದ್ದು ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದು ದೊಡ್ಡ ತಪ್ಪು ಈ ಕುರಿತು ಲಕ್ಷ್ಮೀ ಹೆಬ್ಬಾಳಕರ ರಾಜ್ಯದ ಜನತೆಗೆ ಕ್ಷಮೆಯಾಚಿಸಿದ್ದಾರೆ

ಬೆಳಗಾವಿ ರಾಜಕಾರಣಿಗಳಿಗೆ ಗಡಿ ವಿಷಯ ಅಂದರೆ ಅತ್ಯಂತ ಸೂಕ್ಷ್ಮ ವಿಷಯ ಅದರಲ್ಲಿಯೂ ಬೆಳಗಾವಿ ಉತ್ತರ, ದಕ್ಷಿಣ ಮತ್ತು ಗ್ರಾಮೀಣ ಮತಕ್ಷೇತ್ರದ ರಾಜಕೀಯ ನಾಯಕರಿಗೆ ಗಡಿ ವಿಷಯ ಬಿಸಿತುಪ್ಪು ಅನ್ನೋದರಲ್ಲಿ ಸಂಶಯವೇ ಇಲ್ಲ
ಲಕ್ಷ್ಮೀ ಹೆಬ್ಬಾಳಕರ ಎಡವಟ್ಟು ಮಾಡಿಕೊಂಡಾಗ ಬಿಜೆಪಿ ಲಕ್ಷ್ಮೀ ವಿರುದ್ಧ ಪ್ರತಿಭಟನೆ ಮಾಡಿದೆ ಆದರೆ ಲಕ್ಷ್ಮೀ ಹೆಬ್ಬಾಳಕರ ಅವರ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ ವ್ಯೆಕ್ತವಾದರೂ ಬೆಳಗಾವಿ ಬಿಜೆಪಿ ನಾಯಕರು ಅದನ್ನು ಖಂಡಿಸುವ ಗೋಜಿಗೆ ಹೋಗದೇ ಇರುವ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ ಬೆಳಗಾವಿ ಬಿಜೆಪಿ ನಾಯಕರು ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಪ್ರತಿಭಟಿಸಿ ನಾವೂ ಕೂಡಾ ನಾಡಿನ ಜನತೆಯ ಪರವಾಗಿದ್ದೇವೆ ಅನ್ನೋದನ್ನು ಸಾಭೀತು ಪಡಿಸಲಿ ಈಕುರಿತು ಕನ್ನಡ ಸಂಘಟನೆಗಳ ನಾಯಕರು ಬಿಜೆಪಿ ನಾಯಕರನ್ನು ಪ್ರಶ್ನಿಸುವ ಮನಸ್ಸು ಮಾಡಲಿ
ನಾಡು ನುಡಿ ನೆಲ ಜಲದ ಪ್ರಶ್ನೆ ಬಂದಾಗ ಪಕ್ಷಾತೀತವಾದ ಜಾತ್ಯಾತೀತವಾದ ಹೋರಾಟ ನಡೆಯಬೇಕು ನೆಲ ಜಲಕ್ಕೆ ಧಕ್ಕೆ ತಂದವರಿಗೆ ಪಾಠ ಕಲಿಸಬೇಕು ಇದನ್ನು ಖಂಡಿಸದ ರಾಜಕೀಯ ನಾಯಕರಿಗೂ ಪಾಠ ಕಲಿಸಲು ಮುಂದಾಗಬೇಕು ಅನ್ನೋದಷ್ಟೇ ನಮ್ಮ ಆಶಯ

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.