ಬೆಳಗಾವಿ-ಬೆಳಗಾವಿ ನಗರದಲ್ಲಿ ಫೆ ೧೬ ರಂದು ಮರಾಠಾ ಕ್ರಾಂತಿ ಮೋರ್ಚಾ ನಡೆಯಲಿದೆ ಈ ಮೋರ್ಚಾಗೆ ಸಂಬಂಧಿಸಿದಂತೆ ಕೊಲ್ಹಾಪೂರದಿಂದ ಬೆಳಗಾವಿಗೆ ಬಂದು ನಾಡ ವಿರೋಧಿ ಟೀ ಶರ್ಟ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಖಡೇ ಬಝಾರ ಪೋಲೀಸರು ತಮ್ಮ ವಶಕ್ಜೆ ಪಡೆದು ವಿಚಾರಣೆ ನಡೆಸಿದ್ದಾರೆ
ಬೆಳಗಾವಿ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು ಎನ್ನುವ ಸಂದೇಶ ಬಿಂಬಿಸುವ ಟೀ ಶರ್ಟಗಳನ್ನು ಮತ್ತು ಶಾಲ್ ಗಳನ್ನು ಈತ ಬೆಳಗಾವಿಯ ಖಡೇ ಬಝಾರ ಮತ್ತು ಗಣಪತಿ ಗಲ್ಲಿಯಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ
ಟೀ ಶರ್ಟ ಖರೀಧಿಸಿದ ಗ್ರಾಹಕನೊಬ್ಬ ಟೀ ಶರ್ಟಿನ ಫೋಟೋ ತೆಗೆದು ವ್ಯಾಟ್ಸಪ್ ಗೆ ಹಾಕಿದ್ದಾನೆ ಈ ಸುದ್ದಿ ಪೋಲೀಸರ ಗಮನಕ್ಕೆ ಬರುತ್ತಿದ್ದಂತೆಯೇ ಪೋಲೀಸರು ಟೀ ಶರ್ಟ ಹಾಗು ಇತರ ನಾಡವಿರೋಧಿ ಸಂದೇಶ ಸಾರುವ ಸಾಮುಗ್ರಿಗಳನ್ನು ವಶ ಪಡಿಸಿಕೊಂಡಿದ್ದಾರೆ
ಖಡೇ ಬಝಾರ ಪೋಲೀಸರು ಈ ವ್ಯಾಪಾರಿ ಯನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಎಂಈಎಸ್ ನಾಯಕರು ಬಂಧಿತ ವ್ಯಾಪಾರಿಯನ್ನು ಬಿಡಿಸಲು ಖಡೇ ಬಝಾರ ಠಾಣೆಗೆ ದೌಡಾಯಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ