ಬೆಳಗಾವಿ- ಫೆಬ್ರುವರಿ ೧೬ ಗುರುವಾರ ಬೆಳಗಾವಿಯಲ್ಲಿ ಮರಾಠಾ ಕ್ರಾಂತಿ ಮೋರ್ಚಾ ಏಕ್ ಮರಾಠಾ,ಲಾಕ್ ಮರಾಠಾ ಎಂಬ ಹೆಸರಿನಲ್ಲಿ ಬೃಹತ್ತ ರ್ಯಾಲಿ ನಡೆಯಲಿದ್ದು ವಿವಿಧ ಮರಾಠಾ ಸಂಘಟನೆಗಳು ಎಲ್ಲ ರೀತಿಯ ಸಿದ್ಧತೆ ಗಳನ್ನು ಮಾಡಿಕೊಳ್ಳಲಾಗಿದೆ
ಎಲ್ಲಿಂದ ಎಲ್ಲಿಗೆ…
ಬೆಳಿಗ್ಗೆ ೯ ಘಂಟೆಗೆ ನಗರದ ಶಿವಾಜಿ ಗಾರ್ಡನ್ ದಿಂದ ಆರಂಭವಾಗುತ್ತದೆ ಕಪಿಲೇಶ್ವರ ರಸ್ತೆಯ ಮೂಲಕ ಹೆಮುಕಲಾನಿ ಚೌಕ ಟಿಳಕ ಚೌಕ,ಹುತಾತ್ಮ ಚೌಕ, ಸಮಾದೇವಿ ಗಲ್ಲಿಯ ಮೂಲಕ ಧರ್ಮವೀರ ಸಂಬಾಜಿ ವೃತ್ತದಲ್ಲಿ ಸಮಾವೇಶಗೊಳ್ಳಲಿದೆ
ಎಷ್ಟು ಜನ ಸೇರ್ತಾರೆ…
ಕ್ರಾಂತಿ ಮೋರ್ಚಾದಲ್ಲಿ ಮರಾಠಾ ಸಂಘಟನೆಗಳು ಹತ್ತು ಲಕ್ಷ ಜನ ಸೇರುತ್ತಾರೆ ಎಂದು ಹೇಳಿಕೊಂಡಿದ್ದಾರೆ ಆದರೆ ಕನಿಷ್ಠ ಮೂರು ಲಕ್ಷ ಜನ ಸೇರಬಹುದು ಎಂದು ಅಂದಾಜಿಸಲಾಗಿದೆ
ಎಲ್ಲಿಂದ ಜನ ಬರ್ತಾರೆ…
ಬೆಳಗಾವಿ,ಖಾನಾಪೂರ,ನಿಪ್ಪಾಣಿ ಬೆಳಗಾವಿ ಜಿಲ್ಲೆಯ ಎಲ್ಲ ಮರಾಠಾ ಬಂದುಗಳು ಹಾಗು ಬೀದರ ಬಾಲ್ಕಿ,ವಿಜಯಪೂರ,ಮಹಾರಾಷ್ಟ್ರದ ಕೊಲ್ಹಾಪೂರ ಸೇರಿದಂತೆ ಮಹಾರಾಷ್ಟ್ರ ದ ಎಲ್ಲ ಜಿಲ್ಲೆಗಳಿಂದ ಜನ ಬರ್ತಾರೆ
ವಿಶೇಷತೆ ಏನು….
ಇದರಲ್ಲಿ ರಾಜಕೀಯ ನಾಯಕರ ನಾಯಕತ್ವ ಇಲ್ಲ.ಸಾಮೂಹಿಕ ನಾಯಕತ್ವದಲ್ಲಿ ಮೌನ ಮೋರ್ಚಾ ನಡೆಯುತ್ತದೆ.ಯಾರ ವಿರುದ್ಧ ಘೋಷಣೆ ಮಾಡುವಂತಿಲ್ಲ ರಾಜಕೀಯ ನಾಯಕರು ಭಾಷಣ ಮಾಡುವಂತಿಲ್ಲ ಪೋಟೋ ಬಳಿಸಿ ಫ್ಲೆಕ್ಸ ಪೋಸ್ಟರ್ ಹಾಕುವಂತಿಲ್ಲ
ಭಾಷಣ ಯಾರು ಮಾಡ್ತಾರೆ…
ಬೆಳಗಾವಿಯ ಐದು ಶಾಲಾ ಬಾಲಕಿಯರು ಭಾಷಣ ಮಾಡುತ್ತಾರೆ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿ ಗಳನ್ನು ಆಯ್ಕೆ ಮಾಡಲಾಗಿದ್ದು ಅವರಿಗೆ ಟ್ರೇನಿಂಗ್ ನೀಡಲಾಗುತ್ತಿದೆ ಐದು ಜನ ಬಾಲಕಿಯರು ಧರ್ಮವೀರ ಸಂಬಾಜಿ ವೃತ್ತದಲ್ಲಿ ಲಕ್ಷಾಂತರ ಜನರನ್ನು ಉದ್ಧೇಶಿಸಿ ಮಾತನಾಡಿ ಎಲ್ಲರ ಗಮನ ಸೆಳೆಯಲಿದ್ದಾರೆ
ಬೇಡಿಕೆ ಏನು…
ಮರಾಠಾ ಸಮಾಜಕ್ಕೆ ಮತ್ತು ಮರಾಠಿ ಭಾಷಿಕರಿಗೆ ವಿಶೇಷ ಮೀಸಲಾತಿ ಕಲ್ಪಿಸಬೇಕು,ಅಟ್ರಾಸಿಟಿ ಕಾಯ್ದೆಯ ದುರುಪಯೋಗ ನಿಲ್ಲಿಸಬೇಕು,ಜೊತೆಗೆ ಬೆಳಗಾವಿ ಗಡಿ ಸಮಸ್ಯೆಯನ್ನು ಬೇಗನೆ ಬಗೆಹರಿಸಬೇಕು
ಮನವಿ…
ಮೋರ್ಚಾದಲ್ಲಿ ಲಕ್ಷಾಂತರ ಜನ ಸೇರ್ತಾರೆ ಆದರೆ ಮೋರ್ಚಾ ಮುಗಿದ ಬಳಿಕ ಕೇವಲ ಐದು ಜನರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಅರ್ಪಿಸಲಿದ್ದಾರೆ