ಬೆಳಗಾವಿ- ಬೆಳಗಾವಿ ನಗರದಲ್ಲಿ ಫೆ ೧೬ ರಂದು ನಡೆಯಲಿರುವ ಮರಾಠಾ ಕ್ರಾಂತಿ ಮೋರ್ಚಾಗೆ ಬೆಳಗಾವಿಯ ಮುಸ್ಲಿಮ ಮುಖಂಡರು ಬೆಂಬಲ ಸೂಚಿಸಿದ್ದಾರೆ
ಫೆ ೧೬ ರಂದು ಬೆಳಗಾವಿಯ ಎಂಈಎಸ್ ಹಾಗು ವಿವಿಧ ಮರಾಠಿ ಭಾಷಿಕ ಸಂಘಟನೆಗಳು ವಿಶೇಷ ಮೀಸಲಾತಿಗಾಗಿ ಕ್ರಾಂತಿ ಮೋರ್ಚಾ ಆಯೋಜಿಸಿವೆ ಇದರಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ ಎಂದು ಎಂಈಎಸ್ ನಾಯಕರು ರೀಲು ಬಿಡುತ್ತಿದ್ದಾರೆ
ಶನಿವಾರ ಬೆಳಗಾವಿ ನಗರದ ಶಹಾಪೂರ,ವಡಗಾಂವ ಜಮಾತಿನ ಮುಖಂಡರು ಮೇಯರ್ ಸರೀತಾ ಪಾಟೀಲ ಅವರನ್ನು ಭೇಟಿಯಾಗಿ ೧೬ ರಂದು ನಡೆಯಲಿರುವ ಕ್ರಾಂತಿ ಮೋರ್ಚಾಗೆ ಬೆಂಬಲ ನೀಡುವದಾಗಿ ಘೀಷಿಸಿದ್ದಾರೆ ಬೆಂಬಲ ನೀಡಿರುವ ಬಗ್ಗೆ ಪ್ರಮಾಣ ಪತ್ರವನ್ನು ಮುಸ್ಲಿಂ ಮುಖಂಡರು ಮೇಯರ್ ಗೆ ಹಸ್ತಾಂತರ ಮಾಡಿದ್ದಾರೆ
ನಗರ ಎಂಈಎಸ್ ಕಚೇರಿಯಲ್ಲಿ ಸೇರಿದ ಮುಸ್ಲಿಂ ಮುಖಂಡರನ್ನು ಮಾಜಿ ಶಾಸಕ ಮನೋಹರ ಕಿಣೇಕರ ದೀಪಕ ದಳವಿ ಸೇರಿದಂತೆ ಹಲವಾರು ಜನ ಮುಖಂಡರು ಬರಮಾಡಿಕೊಂಡರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ