ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ,ಉಪ ಮಹಾಪೌರ ಚುನಾವಣೆ ಫೆಬ್ರುವರಿ ತಿಂಗಳಲ್ಲಿ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ. ಬಜೆಟ್ ಅಧಿವೇಶನದ ಬಳಿಕವೇ ಚುನಾವಣೆ ನಡೆಯುವ ಸಾಧ್ಯತೆಗಳೇ ಹೆಚ್ಚಾಗಿವೆ.
ಬೆಳಗಾವಿ ಮಹಾಪೌರ ಉಪಮಹಾಪೌರ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆ,ಉಪ ಮಹಾಪೌರ ಸ್ಥಾನ ಹಿಂದುಳಿದ ಬ ವರ್ಗ ಮಹಿಳೆಗೆ ಮೀಸಲಿಡಲಾಗಿದ್ದು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು ಮಹಾಪೌರ ಸ್ಥಾನಕ್ಕೆ ಬಿಜೆಪಿ ವಲಯದಲ್ಲಿ ತೀವ್ರ ಲಾಭಿ ನಡೆಯುತ್ತಿದೆ.
ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಎರಡು ವರ್ಷದ ಬಳಿಕ ನಡೆಯಿತು,ಈಗ ಮಹಾಪೌರ ಚುನಾವಣೆಯೂ ಮತ್ತಷ್ಟು ವಿಳಂಬವಾಗುವ ಸಾದ್ಯತೆ ಇದ್ದು ಮೇಯರ್ ಚುನಾವಣೆ ರಾಜ್ಯದ ಬಜೆಟ್ ಅಧಿವೇಶನದ ಬಳಿಕವೇ ನಡೆಯಲಿದೆ,ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರುವದರಿಂದ ಈಬಾರಿ ಈ ಸ್ಥಾನವನ್ನು ಪಂಚಮಸಾಲಿ ಸಮಾಜದ ಮಹಿಳೆಗೆ ಕೊಡಬೇಕು ಎಂದು ಪಂಚಮಸಾಲಿ ಗುರುಪೀಠದ ಜಗದ್ಗುರು ಜಯ ಮೃತ್ಯುಂಜಯ ಮಹಾಸ್ವಾಮಿಗಳು ಬೆಳಗಾವಿಯಲ್ಲಿ ಆಗ್ರಹಪಡಿಸಿದ್ದು ವಿಶೇಷವಾಗಿದೆ.
ಈ ಮೊದಲು ಮೇಯರ್ ಇಲೆಕ್ಷನ್ ಬಂದಾಗ ಕನ್ನಡ ಮರಾಠಿ ಎನ್ನುವ ತಿಕ್ಕಾಟ ನಡೆಯುತ್ತಿತ್ತು ಆದ್ರೆ ಇದೇ ಮೊದಲಬಾರಿಗೆ ಜಾತಿ ಆಧಾರಿತ ಪ್ರಸ್ತಾವಣೆ ಮಂಡನೆಯಾಗಿದೆ.