ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಅಧಿಕಾರದ ಅವಧಿ ಫೆಬ್ರುವರಿ 5 ಕ್ಕೆ ಮುಕ್ತಾಯಗೊಳ್ಳಲಿದ್ದು ಹೊಸ ಮೇಯರ್ ಆಯ್ಕೆಗೆ ಇನ್ನುವರೆಗೆ ಪ್ರಾದೇಶಿಕ ಆಯುಕ್ತರು ಚುನಾವಣೆಯ ದಿನಾಂಕವನ್ನು ಪ್ರಕಟಿಸಿಲ್ಲ,ಮೇಯರ್ ಇಲೆಕ್ಷನ್ ನಡೆಯುತ್ತಾ ಇಲ್ವಾ ಎನ್ನುವ ಅನುಮಾನ ಈಗ ಶುರುವಾಗಿದೆ.
ಮೇಯರ್ ಚುನಾವಣೆಯ ದಿನಾಂಕವನ್ನು ಪ್ರಾದೇಶಿಕ ಆಯುಕ್ತರು ನಿರ್ಧರಿಸುತ್ತಾರೆ.ಚುನಾವಣಾ ಅಧಿಕಾರಿಯಾಗಿರುವ ಅವರು ಈವರೆಗೆ ಅಧಿಸೂಚನೆ ಹೊರಡಿಸಿಲ್ಲ ಇವತ್ತು ಅಥವಾ ನಾಳೆ ಅಧಿಸೂಚನೆ ಹೊರಡುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.ಫೆಬ್ರುವರಿ ಎರಡನೇಯ ವಾರದಲ್ಲಿ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಹೇಳಲಾಗುತ್ತಿದ್ದು ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಮೇಯರ್ ಇಲೆಕ್ಷನ್ ಮುಗಿಯದಿದ್ದರೆ ಲೋಕಸಭೆ ಚುನಾವಣೆಯ ನಂತರವೇ ಮೇಯರ್ ಇಲೆಕ್ಷನ್ ನಡೆಯಲಿದೆ ಎನ್ನುವ ಸುದ್ದಿ ಪ್ರಚಾರ ಪಡೆದುಕೊಂಡಿದೆ.
ಬೆಳಗಾವಿ ಮೇಯರ್ ಸ್ಥಾನ SC ಮಹಿಳೆಗೆ ಮೀಸಲಿದ್ದು ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದೆ.ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು ಮೇಯರ್ ಸ್ಥಾನಕ್ಕಾಗಿ ಸವೀತಾ ಕಾಂಬಳೆ ಮತ್ತು ಲಕ್ಷ್ಮೀ ರಾಠೋಡ್ ಅವರ ನಡುವೆ ಪೈಪೋಟಿ ನಡೆಯುತ್ತಿದೆ. ಉಪ ಮೇಯರ್ ಸ್ಥಾನಕ್ಕೆ ಹಲವಾರು ಜನ ಬಿಜೆಪಿ ನಗರ ಸೇವಕರು ಲಾಬಿ ನಡೆಸಿದ್ದಾರೆ.
ಕಳೆದ ಬಾರಿ ಮೇಯರ್ ಸ್ಥಾನ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಪಾಲಾಗಿತ್ತು ಉಪ ಮೇಯರ್ ಸ್ಥಾನ ಬೆಳಗಾವಿ ಉತ್ತರದವರಿಗೆ ಸಿಕ್ಕಿತ್ತು.ಆದ್ರೆ ಈ ಬಾರಿ ಮೇಯರ್ ಸ್ಥಾನ ಬೆಳಗಾವಿ ಉತ್ತರದವರಿಗೆ ಉಪ ಮೇಯರ್ ಸ್ಥಾನ ಬೆಳಗಾವಿ ದಕ್ಷಿಣದವರಿಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ.