ಬೆಳಗಾವಿ- ಸೋತರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ,ಬೆಳಗಾವಿಯಲ್ಲಿ ಅಸ್ತಿತ್ವ ಕಳೆದುಕೊಂಡು,ಸಮಾಧಿ ಯಾಗಿರುವ ಮಹಾರಾಷ್ಟ್ರ ಏಕೀಕರಣ ಸಮೀತಿ ಈ ವರ್ಷ ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸಲು ಅನುಮತಿ ನೀಡುವಂತೆ ಮತ್ತೆ ಕ್ಯಾತೆ ತೆಗೆದಿದೆ.
ರಾಜ್ಯದಲ್ಲಿ ಕೋವೀಡ್ ಇದೆ,ಈ ವರ್ಷ,ದಸರಾ ಉತ್ಸವ,ಕಿತ್ತೂರು ಉತ್ಸವ ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿದೆ.ಜೊತೆಗೆ ರಾಜ್ಯೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದ ಬೆನ್ನಲ್ಲಿಯೇ ನಿನ್ನೆ ಶುಕ್ರವಾರ ಎಂ ಈ ಎಸ್ ಮುಖಂಡರು ದೀಪಕ ದಳವಿ ಅವರ ನೇತ್ರತ್ವದಲ್ಲಿ ಬೆಳಗಾವಿ ನಗರ ಪೋಲಿಸ್ ಆಯುಕ್ತ ತ್ಯಾಗರಾಜನ್ ಅವರನ್ನು ಭೇಟಿಯಾಗಿದ್ದಾರೆ.ಈ ವರ್ಷ ರಾಜ್ಯೋತ್ಸವದ ದಿನ ಕಪ್ಪು ದಿನ ಆಚರಿಸಲು,ಅನುಮತಿನೀಡುವಂತೆ,ಎಂ ಈ ಎಸ್ ಕಂಗಾಲ್ ಕಂಪನಿ ಮನವಿ ಸಲ್ಲಿಸಿ,ಕನ್ನಡಿಗರ ಹಬ್ಬದ ದಿನ ಮತ್ತೆ ಕ್ಯಾತೆ ತೆಗೆಯಲು ಮುಂದಾಗಿದೆ.
ನಮ್ಮ ಹೆಮ್ಮೆಯ ಸರ್ಕಾರಗಳು ಕನ್ನಡಿಗರ ಸ್ವಾಭಿಮಾನದ ರಾಜ್ಯೋತ್ಸವದ ದಿನ ಎಂ ಈ ಎಸ್ ಗೆ ಅನುಮತಿ ನೀಡುತ್ತಲೇ ಬಂದಿವೆ,ಈ ವರ್ಷ ರಾಜ್ಯೋತ್ಸವಕ್ಕೆ ಅನುಮತಿ ನೀಡದ ಸರ್ಕಾರ ಎಂ ಈ ಎಸ್ ಗೆ ಕಪ್ಪು ದಿನ ಆಚರಿಸಲು ಆ ದಿನ ಸೈಕಲ್ ರ್ಯಾಲಿ ಹೊರಡಿಸಲು ಅನುಮತಿ ನೀಡಿದ್ರೂ ಅಚ್ಚರಿ ಪಡಬೇಕಾಗಿಲ್ಲ.
ಎಂ ಈ ಎಸ್ ನಾಯಕರು,ಕಾರ್ಯಕರ್ತರು ರಾಜ್ಯೋತ್ಸವದ ದಿನ ಕಪ್ಪು ಬಟ್ಟೆ ಧರಿಸಿ,ಸೈಕಲ್ ರ್ಯಾಲಿ ಹೊರಡಿಸಿ ,ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಒತ್ತಾಯ ಮಾಡುತ್ತಾರೆ,ಅದಕ್ಕೆ ನಮ್ಮ ಸರ್ಕಾರವೇ ಅನುಮತಿ ಕೊಡುತ್ತದೆ,ಇದು ಕಳೆದ ಐದು ದಶಕಕಗಳಿಂದ ನಡೆಯುತ್ತಲೇ ಬಂದಿದೆ.
ಕನ್ನಡ ನೆಲ.ಜಲ.ಭಾಷೆಗೆ ಧಕ್ಕೆ ಬಂದ್ರೆ ರಕ್ಷಣೆಗೆ ಧಾವಿಸುತ್ತೇವೆ ಎಂದು ರಾಜ್ಯೋತ್ಸವದಲ್ಲಿ ಭಾಷಣ ಮಾಡುವ ಪ್ರತಿಯೊಬ್ಬ ಮುಖ್ಯಮಂತ್ರಿಯೂ ಎಂ ಈ ಎಸ್ ಕರಾಳ ದಿನಕ್ಕೆ ಅನುಮತಿ ನೀಡುತ್ತ ಬಂದಿರುವದು ಈ ನಾಡಿನ ಕರಾಳ ಇತಿಹಾಸ.