ಬೆಳಗಾವಿ-ಇತಿಹಾಸದಲ್ಲಿ ಮೊದಲ ಬಾರಿಗೆ ಎಂಇಎಸ್ ಮಹಾಮೇಳವ್ ಬ್ರೇಕ್ ಬಿದ್ದಿದೆ.ಪ್ರತಿ ವರ್ಷ ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಮಹಾಮೇಳವ್ ಆಯೋಜನೆ ಮಾಡುತ್ತಿದ್ದ ನಾಡದ್ರೋಹಿ ಎಂಇಎಸ್ ಗೆಸಿಎಂ ಬಸವರಾಜ ಬೊಮ್ಮಾಯಿ ಶಾಕ್ ಕೊಟ್ಟಿದ್ದು,ಖಾಕಿ ಪಡೆ ಮೇಳಾವ್ ಗೆ ಹಾಕಲಾಗಿದ್ದ ವೇದಿಕೆಯನ್ನು ವಶಪಡಿಸಿಕೊಂಡಿದೆ.
ಬೆಳಗಾವಿಯಲ್ಲಿ ಇದೇ ಮೊದಲ ಸಲ ಎಂಇಎಸ್ ಮಹಾಮೇಳಾವ್ ಪ್ಯಾಕಪ್ ಆಗಿದ್ದು,
ಎಂಇಎಸ್ ಮುಖಂಡರ ಮೇಲೆ ಪೊಲೀಸರಿಂದ ತೀವ್ರ ನಿಗಾ ಇಡಲಾಗಿದೆ.ಅನೇಕ ಮುಖಂಡರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ.ಪಾಲಿಕೆ ಸದಸ್ಯ ರವಿ ಸಾಂಳುಕೆ, ಮಾಜಿ ಪಾಲಿಕೆ ಸದಸ್ಯ ನೇತಾಜಿ ಜಾಧವ್
ಶುಭಂ ಸಳಕೆ, ಮಾಜಿ ಶಾಸಕ ಮನೋಹರ ಕಿರೇಣಕರ್ ಮೇಲೆ ತೀವ್ರ ನಿಗಾ ಇಡಲಾಗಿದ್ದು ಎಂಇಎಸ್ ನಾಯಕರು
ಎಲ್ಲೂ ಸಭೆ ನಡೆಸದಂತೆ ಪೋಲೀಸ್ರು ನಿಗಾ ಇಟ್ಟಿದ್ದಾರೆ.
ವೇದಿಕೆ ಪ್ಯಾಕಪ್…
ಅಧಿವೇಶನದ ದಿನವೇ ಬೆಳಗಾವಿಯ ವ್ಯಾಕ್ಸೀನ್ ಡಿಪೋದಲ್ಲಿ ಎಂಇಎಸ್ ನಾಯಕರು ಮೇಳಾವ್ ನಡೆಸಲು ಹಾಕಿದ್ದ ವೇದಿಕೆಯನ್ನು ಪ್ಯಾಕಪ್ ಮಾಡಲಾಗಿದೆ.ವೇದಿಕೆಯನ್ನು ತೆರವುಗೊಳಿಸಿದ ಪೋಲೀಸ್ರು ವೇದಿಕೆಯ ಸಾಮುಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಅರ್ಜಿ ತಿರಸ್ಕಾರ…
ವ್ಯಾಕ್ಸಿನ್ ಡಿಪೋದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಅವರು ಮಾದ್ಯಮಗಳ ಜೊತೆ ಮಾತನಾಡಿ,
ವ್ಯಾಕ್ಸಿನ್ ಡಿಪೋ ಸುತ್ತಮುತ್ತ 144ಸೆಕ್ಷನ್ ಜಾರಿ ಮಾಡಿದ್ದೇವೆ.ಎಂಇಎಸ್ ಮಹಾಮೇಳಾವ್‌ಗೆ ಆಯೋಜನೆ ಮಾಡಿದ್ದರು.ಆದ್ರೇ ಇದಕ್ಕೆ ನಿರ್ಬಂಧ ಹೇರಲಾಗಿದೆ.
ಟಿಳಕವಾಡಿ ಪೊಲೀಸ್ ಠಾಣೆಗೆ ಮಹಾಮೇಳಾವ್ ನಡೆಸುವ ಬಗ್ಗೆ ಅರ್ಜಿ ಕೊಟ್ಟಿದ್ದರು.ಅರ್ಜಿಯನ್ನ ತಿರಸ್ಕಾರ ಮಾಡಲಾಗಿದೆ.ಯಾವುದೇ ಸಭೆ ಸಮಾರಂಭ ಮಾಡಲು ಅವಕಾಶ ಇಲ್ಲ. ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಸಭೆ ಸಮಾರಂಭ ಮಾಡಿದ್ರೇ ಅವರನ್ನ ವಶಕ್ಕೆ ಪಡೆದುಕೊಳ್ಳುತ್ತೇವೆ.ವೇದಿಕೆ ನಿರ್ಮಿಸಲು ಹೇಳಿದವರ ಬಗ್ಗೆ ವಿಚಾರಣೆ ಮಾಡುತ್ತೇವೆ.ಸಭೆ ಮಾಡದ ಕಾರಣ ಸದ್ಯಕ್ಕೆ ಯಾರ ಮೇಲೆಯೂ ಕೇಸ್ ಹಾಕಲ್ಲ.ಸಭೆ ಮಾಡಲು ಅಕ್ರಮ ಕೂಟ ರಚಿಸಿದ್ರೇ ಕಾನೂನು ಕ್ರಮ.ವದಂತಿಗೆ ಯಾರು ಕಿವಿ ಕೊಡಬೇಡಿ, ಕಾನೂನು ಉಲ್ಲಂಘನೆ ಮಾಡಿದ್ರೇ ತಕ್ಕಂತೆ ಕ್ರಮ.ಗಡಿಯಲ್ಲೂ ಸಹ 144ಸೆಕ್ಷನ್ ಜಾರಿ ಮಾಡಿದ್ದೇವೆ.ಎಂದು ಎಡಿಜಿಪಿ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.