. ಬೆಳಗಾವಿ-ಕೇಂದ್ರ ಸರ್ಕಾರ 500, 1000 ಮುಖಬೆಲೆ ನೋಟುಗಳನ್ನ ಬ್ಯಾನ್ ಮಾಡಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಫೈನಾನ್ಸ್ ಕಿರಿಕಿರಿ ಆರಂಭವಾಗಿದೆ. ಫೈನಾನ್ಸ್‌ನಲ್ಲಿ ಸಾಲಮಾಡಿದ ತಪ್ಪಿಗೆ ಮಹಿಳೆಯ್ರು ಮಂಗಳಸೂತ್ರವನ್ನೆ ಅಡವಿಟ್ಟು ಸಾಲ ಭರಿಸುವಂತಾಗಿದೆ. ಫೈನಾನ್ಸ್‌ಗಳ ಗೂಂಡಾಗಿರಿಗೆ ಬಡವರು ಬೆಂಡಾಗಿ ಹೋಗಿದ್ದಾರೆ. ಹಳಿಗಳಲ್ಲಿ ಈ ಮೈಕ್ರೋ ಫೈನಾನ್ಸಗಳಿಗೆ ಬೂಟ್ ಬ್ಯಾಂಕ್ ಎಂದು ಕರೆಯುತ್ರಾರೆ
ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿ ಫೈನಾನ್ಸ್ ಕಂಪನಿಗಳು, ಸ್ವಸಹಾಯ ಸಂಘಗಳು, ಬ್ಯಾಂಕ್‌ಗಳು ನೀಡುತ್ತಿರುವ ಕಿರುಕುಳ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಇವರೇಲ್ಲರೂ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದವರು. ಆದ್ರೆ ನೋಟ್ ಬ್ಯಾನ್ ಕ್ರಮದಿಂದ ಈ ಮಹಿಳೆಯರು ಕಣ್ಣೀರಿಡುವಂತಾಗಿದೆ. ಭೀಕರ ಬರ, ನೋಟ್ ಬ್ಯಾನ್‌ನಿಂದಾಗಿ ಇವರಿಗೆ ಸೂಕ್ತ ಕೆಲ್ಸವು ಸಿಗುತ್ತಿಲ್ಲ. ವಾರದ ದುಡಿಮೆಯಲ್ಲಿ ಬದುಕು ಸಾಗಿಸ್ಬೇಕು. ಜತೆಗೆ ಮಾಡಿದ ಸಾಲವನ್ನ ಕಟ್ಟಬೇಕಾಗಿದೆ. ನೋಟ್ ಬ್ಯಾನ್, ಬರದಿಂದ ಕೈತುಂಬ ಕೆಲ್ಸವಿಲ್ಲದಂತಾಗಿದೆ. ಸಾಲ ಭರಿಸಲು ಸಮಯಾವಶಕಾಶ ಕೇಳ್ರಿದು ಫೈನಾನ್ಸ್ ಮತ್ತು ಸ್ವಸಹಾಯ ಸಂಘಗಳು ನೀಡುತ್ತಿಲ್ಲ. ನಿಂತ ಕಾಲಲ್ಲಿಯೇ ಹಣ ಭರಿಸುವಂತೆ ಪೀಡಿಸುತ್ತಿವೆ. ಕೆಲ ಮಹಿಳೆಯರು ಮರ್ಯಾದೆಗೆ ಹೆದರಿ ಮಂಗಳಸೂತ್ರ, ಚಿನ್ನಾಭರಣಗಳನ್ನ ಮಾರಾಟ ಮಾಡಿ ಸಾಲ ತುಂಬಿದ್ದಾರೆ. ಫೈನಾನ್ಸ್ ಕಂಪನಿಗಳ ಗುಂಡಾಗಳು ಸಾಲ ಭರಿಸುವಂತೆ ಬೆದರಿಸುವುದು, ಅವಾಚ ಶಬ್ಧಗಳಿಂದ ನಿಂದಿಸುವ ಕೆಲ್ಸ ಮಾಡುತ್ತಿದ್ದಾರೆ
ಫೈನಾನ್ಸ್, ಸ್ವಸಹಾಯ ಸಂಘಗಳ ಗುಂಡಾಗಳು ಈ ಮಹಿಳೆಯರ ಮನೆಗೆ ಪದೇ ಪದೇ ಬಂದು ಸಾಲ ಭರಿಸುವಂತೆ ಪೀಡಿಸುತ್ತಿದ್ದಾರೆ. ಹುಕ್ಕೇರಿಯ ಧರ್ಮಸ್ಥಳ ಸಂಘ, ರತ್ನಾಕರ್ ಬ್ಯಾಂಕ್, ಆಶಿರ್ವಾದ್ ಫೈನಾನ್ಸ್ ಸಂಕೇಶ್ವರ, ಬೀರೇಶ್ವರ ಕೋ ಆಪರೇಟಿವ್ ಬ್ಯಾಂಕ್ ಸೇರಿ 18 ಫೈನಾನ್ಸ್‌ಗಳಿಂದ 50 ಸಾವಿರ, 25ಸಾವಿರ ಹೀಗೆ ಸಾಲ ಪಡೆದಿದ್ದಾರೆ. ಸಾಲ ವಸೂಲಿಗೆ ಬರುವವರ ವರ್ತನೆಯಿಂದ ಮಹಿಳೆಯರು ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ. ಸದ್ಯದ ಸ್ಥಿತಿಯಲ್ಲಿ ದುಡಿಮೆ ಹಣದಲ್ಲಿ ಉಪ ಜೀವನ ಸಾಗಿಸಬೇಕೋ ಅಥವಾ ಸಾಲಕಟ್ಟಬೇಕೋ ಎಂಬ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ. ಫೈನಾನ್ಸ್ ಗುಂಡಾಗಳ ಕಿರುಕುಳ ತಪ್ಪಿಸಬೇಕು. ಸಾಲಮನ್ನಾ ಮಾಡುವಂತೆ ಸರ್ಕಾರಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ನೂರಾರು ಮಹಿಳೆಯರು ಪ್ರತಿಭಟನೆ ಮಾಡುವ ಮೂಲಕ ಆಗ್ರಹಿಸಿದ್ರು
ಒಟ್ಟ್ನಲ್ಲಿ ಕೇಂದ್ರ ಸರ್ಕಾರ ನೋಟ್ ಬ್ಯಾನ್ ನಿರ್ಧಾರದಿಂದ ಗ್ರಾಮೀಣ ಪ್ರದೇಶದಲ್ಲಿ ಫೈನಾನ್ಸ್‌ಗಳ ಕಿರುಕುಳ ಹೆಚ್ಚಾಗುತ್ತಿದ್ದ್ರೆ. ಸರ್ಕಾರ ತಕ್ಷಣವೇ ಗ್ರನೋಡ್ತಿರುಶದ ಬಡವರ ಮತ್ತು ಕೂಲಕಾರ್ಮಿಕರ ಸಂರಕ್ಷಣೆಗೆ ಬರಬೇಕಿದೆ.