ಬೆಳಗಾವಿಯಲ್ಲಿ ಎಂ.ಎಲ್ ಸಿ ಇಲೆಕ್ಷನ್ ಟ್ರೇನೀಂಗ್‌..

ಪರಿಷತ್ ಚುನಾವಣೆ: ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

ಬೆಳಗಾವಿ, .ಇದೇ ಡಿಸೆಂಬರ್ ‌10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಯಿತು.

ನಗರದ ಜ್ಯೋತಿ ಕಾಲೇಜಿನಲ್ಲಿ ಭಾನುವಾರ (ಡಿ.5) ಬೆಳಗಾವಿ ತಾಲ್ಲೂಕಿನ ಮತಗಟ್ಟೆಗಳ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತರಬೇತುದಾರರಾದ ನಾಗರಾಜ ಮರೆಣ್ಣವರ ಅವರು, ಮತದಾನದ ಮುನ್ನಾ ದಿನವಾದ ಡಿ.9 ರ ಬೆಳಿಗ್ಗೆ 10 ಗಂಟೆಯಿಂದ ಮತದಾನ ದಿನವಾದ ಡಿ.10 ರ ಸಂಜೆ 4 ಗಂಟೆಯವರೆಗೆ ಅಂದರೆ ಮತದಾನ‌ ಕೊನೆಗೊಳ್ಳುವ ಅವಧಿಯವರೆಗೆ ಮತಗಟ್ಟೆ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತು ಕೆಲಸಕಾರ್ಯಗಳ ವಿಧಾನವನ್ನು ತಿಳಿಸಿಕೊಟ್ಟರು.

ಮತಗಟ್ಟೆಗೆ ತೆರಳುವ ಮುಂಚೆ ಮತಪೆಟ್ಟಿಗೆಗಳು, ಮತದಾರರ ಪಟ್ಟಿ ಸೇರಿದಂತೆ ಚೆಕ್ ಲಿಸ್ಟ್ ಪ್ರಕಾರ ಎಲ್ಲ ಅಗತ್ಯ ಸಾಮಗ್ರಿಗಳನ್ನು ಪಡೆದುಕೊಳ್ಳಬೇಕು.
ಮತದಾನ ಆರಂಭಗೊಳ್ಳುವ ಮುಂಚೆ ಏಜೆಂಟರುಗಳ ಸಮ್ಮುಖದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಮತಪೆಟ್ಟಿಗೆ ಸಿದ್ಧತೆ ಮಾಡಿಕೊಳ್ಳುವುದು ಸೇರಿದಂತೆ ಮತದಾನ ಮುಕ್ತಾಯದವರೆಗೆ ಪಾಲಿಸಬೇಕಾದ ನಿಯಮಗಳನ್ನು ಅವರು ವಿವರಿಸಿದರು.

ಬೆಳಗಾವಿ ತಹಶೀಲ್ದಾರ ಆರ್.ಕೆ.ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು. ಮತಗಟ್ಟೆಗಳ ಪಿಆರ್ ಓ ಹಾಗೂ ಎಪಿಆರ್ ಓಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
****

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *