ಬೆಳಗಾವಿ- ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ನಗರದ ಸ್ಲಂ ಪ್ರದೇಶಗಳಲ್ಲಿ ದೆಹಲಿ ಮಾದರಿಯ ಮೋಹಲ್ಲಾ ಕ್ಲಿನಿಕ್ ಗಳನ್ನು ಆರಂಭಿಸಲು ನಿರ್ಧರಿಸಿದೆ
ಪ್ರಾಯೋಗಿಕವಾಗಿ ನಗರದ ಹತ್ತು ಸ್ಲಂ ಪ್ರದೇಶಗಳಲ್ಲಿ ಮೋಹಲ್ಲಾ ಕ್ಲಿನಿಕ್ ಗಳು ಆರಂಭವಾಗಲಿವೆ ಗಾಂಧೀ ನಗರ ಆಝಾಧ ನಗರ,ರುಕ್ಮೀಣಿ ನಗರ,ಸೇರಿದಂತೆ ನಗರದ ಹತ್ತು ಸ್ಲಂ ಪ್ರದೇಶಗಳಲ್ಲಿ ಕ್ಲಿನಿಕ್ ಗಳು ಆರಂಭವಾಗಲಿವೆ
ಈ ಕುರಿತು ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಅಪ್ಪಾಸಾಹೇಬ ನರಟ್ಡಿ ನಮ್ಮ ಹತ್ತಿರ ವೈದ್ಯರಿದ್ದಾರೆ ನಗರದ ಸ್ಲಂ ಪ್ರದೇಶಗಳಲ್ಲಿ ದೆಹಲಿ ಮಾದರಿಯ ಮೋಹಲ್ಲಾ ಕ್ಲಿನಿಕ್ ಆರಂಭಿಸಲು ನಿರ್ಧರಿಸಿದ್ದೇವೆ ಈ ಕುರಿತು ಶಾಸಕ ಫಿರೋಜ್ ಸೇಠ ಅವರ ಜೊತೆ ಚರ್ಚೆ ಮಾಡಿದ್ದೇನೆ ಕ್ಲಿನಿಕ್ ಗಳನ್ನು ಆರಂಭಿಸಲು ಸ್ಥಳಾವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದರು
ಮೋಹಲ್ಲಾ ಕ್ಲಿನಿಕ್ ಆರಂಭಿಸುವ ವಿಚಾರದಲ್ಲಿ ಶಾಸಕ ಸೇಠ ಮತ್ತು ಸಂಬಾಜಿ ಪಾಟೀರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಸ್ಲಂ ಪ್ರದೇಶಗಳಲ್ಲಿ ಕ್ಲಿನಿಕ್ ಆರಂಭಿಸಲು ಸ್ಥಳಗಳನ್ನು ಗುರುತಿಸುವ ಕಾರ್ಯ ನಡೆದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಅಪ್ಪಾ ಸಾಹೇಬ ನರಟ್ಟಿ ತಿಳಿಸಿದ್ದಾರೆ
ದೆಹಲಿಯಲ್ಲಿ ಮೋಹಲ್ಲಾ ಕ್ಲಿನಿಕ್ ಗಳು ಅಪಾರ ಜನ ಮೆಚ್ಚುಗೆ ಗಳಿಸಿವೆ ಬೆಳಗಾವಿ ನಗರದ ಸ್ಲಂ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಆರಂಭವಾಗುವ ಈ ಕ್ಲಿನಿಕ್ ಗಳು ಯಶಸ್ವಿಯಾಗುವದರಲ್ಲಿ ಸಂದೇಹವೇ ಇಲ್ಲ ಇದೊಂದು ಒಳ್ಳೆಯ ಕಾನ್ಸೇಪ್ಟ ಆಗಿದ್ದು ಇದರಿಂದ ಬಡವರು ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಇದರಿಂದ ನಕಲಿ ವೈದ್ಯರ ಹಾವಳಿಯನ್ನು ತಡೆಯಬಹುದಾಗಿದೆ