ಬೆಳಗಾವಿ ನಗರದಲ್ಲಿ ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ

ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು ಬುಧವಾರ ಬೆಳಿಗ್ಗೆ ನಗರದ ದರ್ಬಾರ ಗಲ್ಲಿಯಲ್ಲಿ ನಗರ ಹಾಗು ಸುತ್ತಮುತ್ತಲಿನ ಪ್ರದೇಶಗಳ ಪಂಜಾಗಳು ಸಮಾವೇಶಗೊಂಡವು

ಪಂಜಾಗಳ ಮಿಲನ ನೋಡಲು ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮ ಹಾಗು ಹಿಂದೂ ಬಾಂಧವರು ಸೇರಿದ್ದರು ಖಾನಾಪೂರ ಗನೇಬೈಲ,ಕ್ಯಾಂಪ್ ಕಸಾಯಿ ಗಲ್ಲಿ ಖಂಜರಗಲ್ಲಿ ಗಾಂಧಿ ನಗರ,ರುಕ್ಮೀಣಿ ನಗರ ಸೇರಿದಂತೆ ವಿವಿಧ ಪ್ರದೇಶಗಳ ಪಂಜಾಗಳು ದರ್ಬಾರ ಗಲ್ಲಿಯಲ್ಲಿ ಕೂಡಿಕೊಂಡವು ಟೋಪಿ ಗಲ್ಲಿಯ ಪಂಜಾಗಳು ಬಂದ ನಂತರ  ಎಲ್ಲ ಪಂಜಾಗಳ ಮಿಲನದ ಕಾಎರ್ಯಕ್ರಮ ನಡೆಯಿತು

ದರ್ಬಾರ ಗಲ್ಲಿಯಲ್ಲಿ ಅಲಾಂವಾದಲ್ಲಿ ಕಿಚ್ಚುಹಾಕಲಾಗಿತ್ತು ಅಲಾಂವಾದಲ್ಲಿ ಹೊತ್ತಿದ ಕಿಚ್ಚಿನಲ್ಲಿ ಭಕ್ತರು ಉಪ್ಪು ಸುರಿದು ತಮ್ಮ ಹರಕೆಯನ್ನು ತೀರಿಸಿದರು

ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಮೊಹರಂ ಹಬ್ಬದ ನಿಮಿತ್ಯ ಶರಬತ ಹಂಚುವ ಕಾರ್ಯಕ್ರಮ ನಡೆಯಿತು ಆಝಂ ನಗರ ಕೆಎಸ್ ಆರ್ ಟಿಸಿ ನೌಕರರು ಶರಬತ ಹಂಚುವ ಮೂಲಕ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು

ನಗರದ ವಿವಿಧ ಪ್ರದೇಶಗಳಲ್ಲಿ ಪ್ರತಿಷ್ಟಾಪಿಸಿ ಆರಾಧಿಸುವ ಡೋಲಿಗಳನ್ನು ಬೆಳಗಾವಿಯ ಫೋರ್ಟ ರಸ್ತೆಯಿಂ ಭವ್ಯ ಮೆರವಣಿಗೆಯ ಮೂಲಕ ಡೋಲಗಳನ್ನು ಬುಧವಾರ ರಾತ್ರಿ ವಿಸರ್ಜನೆ ಮಾಡಲಾಗುತ್ತದೆ ಹಸನ ಹುಸೇನರ ತ್ಯಾಗ ಬಲಿದಾನ ಸ್ಮರಿಸುವ ಮೊಹರಂ ಇದಾಗಿದ್ದು ಈ ದಿನ ಭಕ್ತರು ಹಸನ ಹುಸೇನರ ತ್ಯಾಗ ಬಲಿದಾನ ವನ್ನು ಉಪವಾಸದ ಮೂಲಕ ಸ್ಮರಿಸಿಕೊಂಡರು

ಮೊಹರಂ ಹಬ್ಬದ ದಿನ ನಗರದಲ್ಲಿ ಪೋಲಿಸ್ ಬಂದೋಬಸ್ತಿಯನ್ನು ನಿಯೋಜಿಸಲಾಗಿತ್ತು

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *