ಬೆಳಗಾವಿ- ಸುರೇಶ್ ಅಂಗಡಿ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಕಿತ್ತೂರು ಚೆನ್ನಮ್ಮನ ಹೆಸರು ನಾಮಕರಣ ಮಾಡುವ ವಿಚಾರದಲ್ಲಿ ದೊಡ್ಡ ಹೋರಾಟವನ್ನೇ ಮಾಡಿದ್ದರು,ಅವರು ಈಗ ನಮ್ಮ ಜೊತೆ ಇಲ್ಲ,ಅವರ ಕಂಡ ಕನಸು ನನಸು ಮಾಡುವ ನಿಟ್ಟಿನಲ್ಲಿ ಯಾವೊಬ್ಬ ಬಿಜೆಪಿ ನಾಯಕನೂ ತುಟಿ ಬಿಚ್ವುತ್ತಿಲ್ಲ, ಅವರ ಧರ್ಮಪತ್ನಿ ಮಂಗಲಾ ಅಂಗಡಿ ಅವರು ಈಗ ಬೆಳಗಾವಿಯ ಸಂಸದರಾಗಿದ್ದರೂ ಈಬಗ್ಗೆ ಯಾವುದೇ ರೀತಿಯ ಪ್ರಯತ್ನ ಮಾಡದೇ ಇರುವದು ದುಖದ ಸಂಗತಿಯಾಗಿದೆ.
ಯಾವುದೇ ಒಂದು ಕನಸು ನನಸಾಗಲು ರಾಜಕೀಯ ಇಚ್ಛಾಶಕ್ತಿ ಬೇಕು.ಶಿವಮೊಗ್ಗ ಏರ್ ಪೋರ್ಟ್ ಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರ ಹೆಸರು ನಾಮಕರಣ ಮಾಡಲು ನಿರ್ಧರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವೀರರಾಣಿ ಚನ್ನಮ್ಮಾಜಿ ಹೆಸರು ನಾಮಕರಣ ಮಾಡುವ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುತ್ತಿರುವದು ದುರ್ದೈವದ ಸಂಗತಿ
ವೀರರಾಣಿ ಕಿತ್ತೂರು ಚನ್ನಮ್ಮನ ಹೆಸರನ್ನು ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ನಾಮಕರಣ ಮಾಡುವ ವಿಚಾರದಲ್ಲಿ ಮೊದಲು ಬೆಳಗಾವಿಯ ಸಂಸದೆ ಮಂಗಲಾ ಅಂಗಡಿ ಮತ್ತು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಧ್ವನಿ ಎತ್ತುವದು ಅವರ ಕರ್ತವ್ಯ ಇವರಿಬ್ಬರು ಇಷ್ಟೂ ಮಾಡದಿದ್ದರೆ ಇವರು ಸಂಸದರಾಗಿ ಏನು ಪ್ರಯೋಜನ ? ಅನ್ನೋದು ಜನಸಾಮಾನ್ಯರ ಪ್ರಶ್ನೆಯಾಗಿದೆ.
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಿಗಿಂತ ಮೊದಲು ಬ್ರಿಟಿಷರ ವಿರುದ್ಧ ಸಮರ ಸಾರಿ ಬ್ರಿಟಿಷ್ ಕಲೆಕ್ಡರ್ ಥ್ಯಾಖರೆಯ ಸಮಾದಿ ಮಾಡಿದ್ದು ವೀರರಾಣಿ ಕಿತ್ತೂರು ಚನ್ನಮ್ಮಾಜಿ ಎನ್ನುವ ವಿಚಾರ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಇತಿಹಾಸದಲ್ಲಿ ನಮೂದಿಸಬೇಕಾಗಿದೆ.ಈ ವಿಷಯವನ್ನು ಸಂಸತ್ತಿನಲ್ಲಿ ಧ್ವನಿ ಎತ್ತಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಜವಾಬ್ದಾರಿಯೂ ಸಂಸದೆ ಮಂಗಲಾ ಅಂಗಡಿ ಅವರ ಮೇಲಿದೆ.