ಬೆಳಗಾವಿ- ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ತೀವ್ರ ಕಸರತ್ತು ನಡೆಯುತ್ತಿದೆ.ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡಲು ಕಾಂಗ್ರೆಸ್ ಟಿಕೆಟ್ ಗಾಗಿ ಇಬ್ಬರು ನಾಯಕರು ಪ್ರಯತ್ನ ಮಾಡುತ್ತಿರುವ ವಿಚಾರ ಈಗ ಬೆಳಗಾವಿ ಜಿಲ್ಲೆಯಲ್ಲಿ ಚರ್ಚೆಗೆ ಅಸ್ತ್ರವಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಯುವ ನಾಯಕ ಕಿರಣ ಸಾಧುನವರ,ಮೃನಾಲ ಹೆಬ್ಬಾಳಕರ,ಅವರ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲಿಯೇ ಈಗ ಎರಡು ಹೊಸ ಮುಖಗಳು ಎಂಟ್ರಿಯಾಗಿವೆ.ವಿಧಾನ ಪರಿಷತ್ತ ಸದಸ್ಯ ನಾಗರಾಜ್ ಯಾದವ್ ಹಾಗೂ ಬೆಳಗಾವಿಯ ಡಾ.ಗಿರೀಶ್ ಸೋನವಾಲ್ಕರ್ ಅವರ ಹೆಸರುಗಳು ಕೇಳಿಬರುತ್ತಿವೆ.
ಬೆಳಗಾವಿಯ ಅಳಿಯ ನಾಗರಾಜ್ ಯಾದವ್ ಸಿಎಂ ಸಿದ್ರಾಮಯ್ಯನವರ ಶಿಷ್ಯ, ಡಿ.ಕೆ ಶಿವಕುಮಾರ್ ಸತೀಶ್ ಜಾರಕಿಹೊಳಿ ಅವರ ಜೊತೆಯೂ ಉತ್ತಮ ಸಂಬಂಧ ಹೊಂದಿರುವ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸುವ ಆಸಕ್ತಿ ಹೊಂದಿದ್ದು ಟಿಕೆಟ್ ಗಾಗಿ ಒಂದು ಸುತ್ತಿನ ಕಸರತ್ತು ಮಾಡಿದ್ದಾರೆ.
ನಾಗರಾಜ್ ಯಾದವ್ ಅವರು ಬೆಳಗಾವಿ ಮರಾಠಾ ಮಂಡಳದ ಅಧ್ಯಕ್ಷರಾಗಿರುವ ರಾಜಶ್ರೀ ಹಲಗೇಕರ್ ಅವರ ಪತಿ,ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮರಾಠಾ ಸಮಾಜದ ಮತಗಳು ಹೆಚ್ವಿನ ಸಂಖ್ಯೆಯಲ್ಲಿದ್ದು ತಮಗೆ ಟಿಕೆಟ್ ಕೊಟ್ರೆ ಸಹಜವಾಗಿ ಮರಾಠಾ ಸಮಾಜದ ಮತಗಳನ್ನು ಪಡೆಯಬಹುದು ಎನ್ನುವ ವಿಚಾರವನ್ನು ಕಾಂಗ್ರೆಸ್ ವರಿಷ್ಠರಿಗೆ ನಾಗರಾಜ್ ಯಾದವ್ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಟಿಕೆಟ್ ಗಾಗಿ ಇನ್ನೊಂದು ಹೊಸ ಮುಖ ಮತ್ತು ಪ್ರಭಾವಿ ಆಗಿರುವ ಬೆಳಗಾವಿಯ ಡಾ.ಗಿರೀಶ್ ಸೋನವಾಲ್ಕರ್ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಿಲ್ಲಿಸಲು ಬೆಳಗಾವಿ ಜಿಲ್ಲೆಯ ಕೆಲವು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದು,ಡಾ.ಸೋನವಾಲ್ಕರ್ ಅವರನ್ನು ಕಣಕ್ಕಿಳಿಸಿದ್ರೆ ಬಿಜೆಪಿಗೆ ಅವರು ಪ್ರಬಲ ಪೈಪೋಟಿ ಕೊಡಬಹುದು ಎನ್ನುವದು ಕೆಲವರ ಲೆಕ್ಕಾಚಾರವಾಗಿದೆ.ಡಾ.ಸೋನವಾಲ್ಕರ್ ಅವರು ಈ ಹಿಂದೆ ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಬಿಜೆಪಿ ಟಿಕೆಟ್ ಗಾಗಿ ಪ್ರಯತ್ನ ಮಾಡಿದ್ದರು.ಆದ್ರೆ ಕಾಂಗ್ರೆಸ್ ನಾಯಕರು ಈಗ ಡಾ.ಸೋನವಾಲ್ಕರ್ ಅವರಿಗೆ ಗಾಳ ಹಾಕಿದ್ದಾರೆ. ಎನ್ನುವ ಸುದ್ದಿ ಪ್ರಚಾರ ಪಡೆಯುತ್ತಿದೆ.
ಒಟ್ಟಾರೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಕಾಣದ ಕೈ ಗಳು ಕಸರತ್ತು ನಡೆಸಿದ್ದು ಸತ್ಯ.