ಬೆಳಗಾವಿ- ಮಹಾನಗರ ಪಾಲಿಕೆಯ ಆಯುಕ್ತ ಶಶಿಧರ ಕುರೇರ ಅವರು ನಗರದಲ್ಲಿ ರಸ್ತೆ ಅತೀಕ್ರಮಣವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದು ಸಂಸದ ಸುರೇಶ ಅಂಗಡಿ,ಮೇಯರ್ ಸರೀತಾ ಪಾಟೀಲ ಪೋಲೀಸ್ ಆಯುಕ್ತ ಕೃಷ್ಣಭಟ್ ಅವರು ತೆರವು ಕಾರ್ಯಾಚರಣೆ ನಡೆದ ಸ್ಥಳಗಳನ್ನು ಪರಶೀಲಿಸಿದರು
ಗಣಪತಿ ಗಲ್ಲಿ,ಮಾರುತಿ ಗಲ್ಲಿ ಖಡೇ ಬಝಾರ ಪ್ರದೇಶದಲ್ಲಿ ಸಂಚರಿಸಿದ ಅವರು ಪಾಲಿಕೆ ಅಧಿಕಾರಿಗಳ ಯಶಸ್ವಿ ಕಾರ್ಯಾಚರಣೆ ಕುರಿತು ಮೆಚ್ಚುಗೆ ವ್ತಕ್ತಪಡಿಸಿದರು
ಈ ಸಂಧರ್ಭದಲ್ಲಿ ವ್ಯಾಪಾರಿಗಳು ಸಂಸದ ಸುರೇಶ ಅಂಗಡಿ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು ಇದಾದ ಬಳಿಕ ಮಾರುತಿ ಮಂದಿರದಲ್ಲಿ ವ್ಯಾಪಾರಿಗಳು ಸಭೆ ಸೇರಿದರು
ಇಲ್ಲಿ ಮಾತನಾಡಿದ ಸುರೇಶ ಅಂಗಡಿ ನಗರದಲ್ಲಿ ವಾಹನ ದಟ್ಟನೆ ಹೆಚ್ಚಾಗಿದೆ ರಸ್ತೆ ಸಂಚಾರ ಅಸ್ತವ್ಯೆಸ್ತಗೊಂಡ ಹಿನ್ನಲೆಯಲ್ಲಿ ಪಾಲಿಕೆ ಅಧಿಕಾರಿಗಳು ರಸ್ತೆ ಅತೀಕ್ರಮಣವನ್ನು ತೆರವು ಮಾಡಿದ್ದಾರೆ ಈ ವಿಷಯದಲ್ಲಿ ವ್ಯಾಪಾರಿಗಳು ಸಹಕರಿಸಬೇಕು ಬೆಳಗಾವಿ ನಗರ ಈಗ ಸಾರ್ಟ ಸಿಟಿ ಆಗುತ್ತಿದೆ ಸಾರ್ವಜನಿಕರ ಸಹಕಾರ ಇಲ್ಲದೇ ಯಾವುದೇ ಅಭಿವೃದ್ಧಿ ಸಾದ್ಯವಿಲ್ಲ ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿಕೊಂಡರು