ಬೆಳಗಾವಿ-ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬಂದಿದೆ ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಆಗಲಿ ಎನ್ನುವ ಕೂಗು ಕೇಳಿಬಂದಿದೆ ಕಾಂಗ್ರೆಸ್ ಅದಕ್ಕೆ ಸಾಥ್ ನೀಡಿದ ಕಾರಣ ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಸಂಸದರೊಬ್ಬರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ತಂತ್ರವನ್ನು ರಾಜ್ಯದ ಬಿಜೆಪಿ ನಾಯಕರು ರೂಪಿಸಿದ್ದು ಲಿಂಗಾಯತ ಫ್ಯಾಕ್ಟರ್ ನಲ್ಲಿ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರಿಗೆ ಮಂತ್ರಿ ಸ್ಥಾನ ಸಿಗೋದು ಗ್ಯಾರಂಟಿ
ಸಂಸದ ಪ್ರಲ್ಹಾದ ಜೋಶಿ ಮತ್ತು ಸಂಸದ ಸುರೇಶ ಅಂಗಡಿ ಅವರ ನಡುವೆ ಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು ಆದರೆ ರಾಜ್ಯದ ಬಲಿಷ್ಠ ಸಮುದಾಯ ಆಗಿರುವ ಲಿಂಗಾಯತ ಸಮುದಾಯದ ಸಂಸದರಿಗೆ ಮಂತ್ರಿ ಸ್ಥಾನ ನೀಡುವ ನಿರ್ಧಾರವನ್ನು ರಾಜ್ಯದ ಬಿಜೆಪಿ ನಾಯಕರು ಕೈಗೊಂಡಿರುವದರಂದ ಸಂಸದ ಸುರೇಶ ಅಂಗಡಿ ಅವರು ಸೆಂಟ್ರೆಲ್ ಮಿನಿಸ್ಟರ್ ಆಗೋದು ಖಚಿತವಾಗಿದ್ದು ಸಂಸದ ಸುರೇಶ ಅಂಗಡಿ ಅವರು ಬೆಂಗಳೂರಿನಿಂದ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ
ಮೂರು ಬಾರಿ ಸಂಸದರಾಗಿರುವ ಸುರೇಶ ಅಂಗಡಿ ಬೆಳಗಾವಿ ಸಮೀಪದ ಕೆಕೆ ಕೊಪ್ಪ ಗ್ರಾಮದವರು ಶ್ರಮಜೀವಿಗಳಾಗಿರುವ ಅವರು ಸಿಮೆಂಟ್ ಏಜನ್ಸಿ ಯಿಂದ ತಮ್ಮ ಉದ್ಯಮ ಆರಂಭಿಸಿ ಇಂದು ದೊಡ್ಡ ಉದ್ಯಮಿಯಾಗಿ ಬೆಳೆಯುವದರ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿಯೂ ಹೆಸರು ಗಳಿಸಿ ಇಂದು ಕೇಂದ್ರ ಮಂತ್ರಿಯಾಗುವ ಸೌಭಾಗ್ಯವನ್ನು ಪಡೆದುಕೊಂಡಿದ್ದಾರೆ
ರಾಜಕೀಯ ಕ್ಷೇತ್ರದ ಲಕ್ಕಿ ಸ್ಟಾರ್ ಆಗಿರುವ ಸಂಸದ ಸುರೇಶ ಅಂಗಡಿ ಕೇಂದ್ರದ ಮಂತ್ರಿಯಾಗುತ್ತಿರುವ ವಿಷಯ ಬೆಳಗಾವಿ ಜಿಲ್ಲೆಯ ಜನತೆಗೆ ಖುಷಿ ತಂದಿದೆ