Breaking News

ತಪ್ಪು ತಿದ್ದಿಕೊಳ್ಳಲು ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಅವಕಾಶ ಕೊಡಿ-ಕೋಡಿಹಳ್ಳಿ

ಮಹಾದಾಯಿ ವಿಷಯದಲ್ಲಿ ಪ್ರಧಾನಿ ಮದ್ಯಸ್ಥಿಕೆ ವಹಿಸಲಿ

ಬೆಳಗಾವಿ-ಮಹಾದಾಯಿ ಮತ್ತು ಕಳಸಾಬಂಡೂರಿ ಸಮಸ್ಯೆ ರಾಜ್ಯದ ಜ್ವಲಂತ ಸಮಸ್ಯೆ ಆಗಿದ್ದು ಈ ವಿಷಯದಲ್ಲಿ ಬಿಜೆಪಿ ನಾಯಕರು ನಾಟಕ ಮಾಡದೇ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡಿಸಿಕೊಂಡು ಚರ್ಚೆ ಆರಂಭಿಸಬೇಕು ಎಂದು ರೈತನಾಯಕ ಕೋಡಿಹಳ್ಳಿ ಚಂದ್ರಶೇಖರ ಒತ್ತಾಯ ಮಾಡಿದ್ದಾರೆ
ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್ ಅವರು ಪ್ರಧಾನಿಯವರನ್ನು ಬಿಟ್ಟು ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಮಾತನಾಡುವದು ಸರಿಯಲ್ಲ ಇದು ನಾಟಕೀಯ ರಾಜಕೀಯ ಬೆಳವಣಿಗೆ ಎಂದು ಭಾವಿಸಬೇಕಾಗುತ್ತದೆ ಎಂದು ಕೋಡಿಹಳ್ಳಿ ಎಚ್ಚರಿಸಿದ್ದಾರೆ

ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಿ ಕೂಡಲೇ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಮಹಾದಾಯಿ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಕೋಡಿಹಳ್ಳಿ ಒತ್ತಾಯಿಸಿದರು
ಚನ್ನಮ್ಮ ವೃತ್ತದಲ್ಲಿ ಸಭೆ ಸೇರಿದ ನೂರಾರು ಜನ ರೈತರು ರಾಜ್ಯ ಹಾಗು ಕೇಂದ್ರಸರ್ಕಾರಗಳ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದರು
ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ ಅವರು ನಾಡವಿರೋಧಿ ಹೇಳಿಕೆ ಕುರಿತು ಈಗಾಗಲೇ ಬಹಿರಂಗವಾಗಿ ಕ್ಷಮೆಯಾಚಿಸಿದ್ದು ತಪ್ಪು ತಿದ್ದಿಕೊಳ್ಳಲು ಅವರಿಗೆ ಅವಕಾಶ ಕೊಡಬೇಕು ಎಂದು ಕೋಡಿಹಳ್ಳಿ ಅಭಿಪ್ರಾಯ ವ್ಯೆಕ್ತಪಡಿಸಿದರು

Check Also

ಯು.ಟಿ ಖಾದರ್ ಹೊಸ ಇತಿಹಾದ, ಬೆಳಗಾವಿ ಸುವರ್ಣಸೌಧದೊಳಗೆ “ಅನುಭವ ಮಂಟಪ.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ, ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ ಮತ್ತೊಂದು …

Leave a Reply

Your email address will not be published. Required fields are marked *