ಬೆಳಗಾವಿ- ಬೆಳಗಾವಿ ಮಹಾನಗರ ದಿನದಿಂದ ದಿನಕ್ಕೆ ಮಾಡರ್ನ್ ಆಗುತ್ತಲೇ ಇದೆ ನಗರದ ಪಾರ್ಕಿಂಗ್ ಸಮಸ್ಯೆಯನ್ನು ಬಗೆ ಹರಿಸಲು ನಗರದಲ್ಲಿ ಮಲ್ಟೀಲೇವಲ್ ಕಾರ್ ಪಾರ್ಕಿಂಗ್ ಕಟ್ಟಡಗಳನ್ನು ನಿರ್ಮಿಸಲು ಮಹಾನಗರ ಪಾಲಿಕೆ ಮುಂದಾಗಿದೆ
ಬೆಳಗಾವಿ ನಗರದ ಹೃದಯ ಭಾಗದಲ್ಲಿರುವ ಬಾಪಟ ಗಲ್ಲಿಯಲ್ಲಿ 4.5 ಕೋಟಿ ರೂ ವೆಚ್ಚದಲ್ಲಿ ಹೈಡ್ರಾಲಿಕ್ ಲಿಫ್ಡ ಆಧಾರದ ಮಲ್ಟೀ ಲೇವಲ್ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು ಎರಡು ತಿಂಗಳಲ್ಲಿ ಕಾಮಗಾರಿ ಶುರುವಾಗಲಿದೆ
ನಗರದಲ್ಲಿ ಕಾರ್ ಪಾರ್ಕಿಂಗ್ ಸಮಸ್ಯೆ ಇದೆ ಮಾರುಕಟ್ಟೆ ಪ್ರದೇಶದಲ್ಲಿ ಕಾರ್ ಪಾರ್ಕ ಮಾಡಲು ಸ್ಥಳಾವಕಾಶವೇ ಇಲ್ಲದಂತಾಗಿದೆ ಬಾಪಟ ಗಲ್ಲಿಯಲ್ಲಿ ಮಲ್ಟೀ ಲೇವಲ್ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಾಣವಾದರೆ 110 ಕಾರುಗಳನ್ನು ಇಲ್ಲಿ ಪಾರ್ಕ ಮಾಡಬಹುದಾಗಿದೆ
ಖಂಜರ ಗಲ್ಲಿಯಲ್ಲಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಸ್ಟೋರ್ ಬೇರೆ ಕಡೆಗೆ ಶಿಪ್ಟ ಮಾಡಿ ಅಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಗಾಗಿ ಎಲ್ಲ ರೀತಿಯ ವ್ಯೆವಸ್ಥೆ ಮಾಡಲಾಗಿದ್ದು ಪಾಲಿಕೆ ಅಧಿಕಾರಿಗಳು ಇದನ್ನು ಇನ್ನುವರೆಗೆ ಉದ್ಘಾಟಿಸುವ ಗೋಜಿಗೆ ಹೋಗಿಲ್ಲ
ಖಂಜರ್ ಗಲ್ಲಿಯ ಪಾರ್ಕಿಂಗ್ ಸ್ಥಳ ಉದ್ಘಾಟನೆಯಾದರೆ ಖಡೇ ಬಝಾರ ಕಚೇರಿ ರಸ್ತೆ ಮತ್ತು ಗಣಪತಿ ಬೀದಿಯ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ ಆದರೆ ಯಾಕೋ ಏನೋ ಪಾಲಿಕೆ ಅಧಿಕಾರಿಗಳು ಇದನ್ನು ಸೇವೆಗೆ ಸಮರ್ಪಿಸಲು ಹಿಂದೇಟು ಹಾಕುತ್ತಿರುವದು ದೊಡ್ಡ ದುರ್ದೈವ