Breaking News

ಸಂಸದರಿಂದ ಪಾಸ್ ಪೋರ್ಟ್ ಸೇವಾ ಕೇಂದ್ರದ ಸ್ಥಳ ಪರಶೀಲನೆ

ಬೆಳಗಾವಿ-ಸಂಸದ ಸುರೇಶ ಅಂಗಡಿ ಅವರ ಹಲವಾರು ವರ್ಷಗಳ ಹೋರಾಟದ ಫಲವಾಗಿ ಬೆಳಗಾವಿಗೆ ಪಾಸ್ ಪೋರ್ಟ್ ಸೇವಾ ಕೇಂದ್ರ ಮಂಜೂರಾಗಿದ್ದು ಶನಿವಾರ ಸಂಸದ ಸುರೇಶ ಅಂಗಡಿ ನಗರದ ಕೇಂದ್ರ ಅಂಚೆ ಕಚೇರಿಯಲ್ಲಿ ಸ್ಥಳ ಪರಶೀಲನೆ ಮಾಡಿದರು

ಈ ಸಂಧರ್ಭದಲ್ಲಿ ಮಾತನಾಡಿದ ಸಂಸದ ಸುರೇಶ ಅಂಗಡಿ ಬೆಳಗಾವಿ ನಗರದಲ್ಲಿ ಪಾಸ್ ಪೋರ್ಟ ಸೇವಾ  ಕೇಂದ್ರ ಮಂಜೂರಾಗಿದ್ದು ನಗರದ ಕೇಂದ್ರ ಅಂಚೆ ಕಚೇರಿಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದರು

ನಗರದ ಜನತೆ ಪಾಸ್ ಪೋರ್ಟ್ ಮಾಡಿಸಲು ಹುಬ್ಬಳ್ಳಿಗೆ ಹೋಗುವ ಪರಿಸ್ಥತಿ ಇತ್ತು ಈಗ ಕೇಂದ್ರ ಬೆಳಗಾವಿಗೆ ಮಂಜೂರಾಗಿರುವದರಿಂದ ಇಲ್ಲಿಯ ಜನರಿಗೆ ಅನಕೂಲವಾಗಲಿದೆ ಎಂದು ಸಂಸದ ಸುರೇಶ ಅಂಗಡಿ ತಿಳಿಸಿದರು

ಹದಿನೈದು ದಿನದ ಒಳಗಾಗಿ ಬೆಳಗಾವಿಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಆರಂಭವಾಗಲಿದೆ ಎಂದು ಅಂಗಡಿ ಹೇಳಿದರು

ಟ್ರಾಫಿಕ್ ಮ್ಯನೇಜ್ಮೇಂಟ್ ವಿರುದ್ಧ ಕಿಡಿಕಾರಿದ ಅವರು ಬೆಳಗಾವಿ ನಗರದಲ್ಲಿ ಟ್ರಾಫಕ್ ಮ್ಯಾನೇಜ್ಮೆಂಟ್ ಸರಿಯಾಗಿಲ್ಲ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ ಪೋಲೀಸರು ಅಟೋಗಳನ್ನು ಹಿಡಿಯುವ ಮೊದಲು ಟ್ರಾಫಿಕ್ ವ್ಯೆವಸ್ಥೆ ಸುಧಾರಿಸಲಿ ಜಿಲ್ಲಾಧಿಕಾರಿಗಳು ಅಟೋ ಮೀಟರ್ ಕಡ್ಡಾಯ ಮಾಡುವ ಮೊದಲು ನಗರದ ರಸ್ತೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಿ ಎಂದು ಸುರೇಶ ಅಂಗಡಿ ಸಲಹೆ ನೀಡಿದ್ದಾರೆ

 

Check Also

ಶಿವಸಾಗರ ಸಕ್ಕರೆ ಕಾರ್ಖಾನೆ ಮಾರಾಟ, ಸಿಡಿದೆದ್ದ ಷೇರುದಾರರು, ಡಿಸಿ ಕಚೇರಿಯಲ್ಲಿ ಹಠಾತ್ ಸಭೆ…!!

ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದ ಷೇರುದಾರರು, ರೈತರು.. ಬೆಳಗಾವಿ ಡಿಸಿ ನೀಡಿದ ಭರವಸೆ ಏನು? ಬೆಳಗಾವಿ: …

Leave a Reply

Your email address will not be published. Required fields are marked *