ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಯಾಕೋ ಏನೋ ಗೊತ್ತಿಲ್ಲ ಲವ್ ಡವ್ ಗಳು ಸಕ್ಸೆಸ್ ಆಗುತ್ತಿಲ್ಲ ಪ್ರೇಮಿಗಳ ಮೇಲೆ ಯಾರ ದೃಷ್ಠಿ ಬಿದ್ದಿದೆಯೋ ಗೊತ್ತಿಲ್ಲ ಲವ್ ಕೇಸ್ ಗಳು ಮರ್ಡರ್ ನಲ್ಲಿ ಪರಿವರ್ತನೆ ಆಗುತ್ತಿವೆ. ಬೆಳಗಾವಿಯ ಶಹಾಪೂರಿನಲ್ಲಿ ಪ್ರೀತಿ ಪ್ರೇಮದ ಹೆಸರಿನಲ್ಲಿ ಎರಡು ಜೀವಗಳು ಬಲಿಯಾದ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲೆಯಲ್ಲಿ ಈಗ ಮತ್ತೊಂದು ಘೋರ ಘಟನೆ ನಡೆದಿದೆ.
ಪ್ರೀತಿಸಿದ ಯುವತಿ ಜೊತೆಗೆ ಮದುವೆ ಆಗ್ತೀನಿ ಎಂದು ಹಠ ಸಾಧಿಸಿದ ಮಗನನ್ನು ಮದುವೆಗೆ ಮೊದಲೇ ತಂದೆ ಮತ್ತು ಹಿರಿಯ ಮಗ ಕೂಡಿ,ಹಸೆಮಣೆ ಏರಬೇಕಿದ್ದ ಕಿರಿಯ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮದುವೆ ಮಾಡಿಸಿಲ್ಲ ಎಂದು ಕುಡಿದು ಬಂದು ನಿತ್ಯ ಕಿರಿಕಿರಿ ಮಾಡ್ತಿದ್ದ ಮಗನನ್ನು,ತಂದೆ ಮತ್ತು ಮೊದಲನೇ ಮಗನಿಂದ ಕಲ್ಲು, ಇಟ್ಟಿಗಳಿಂದ ತಲೆ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಚಿಕ್ಕನಂದಿಹಳ್ಳಿ ಗ್ರಾಮದ ಮಂಜುನಾಥ ಉಳ್ಳಾಗಡ್ಡಿ (25) ಹತ್ಯೆಯಾದ ದುರ್ದೈವಿಯಾಗಿದ್ದು.ಸಹೋದರ ಗುರುಬಸಪ್ಪ ಉಳ್ಳೆಗಡ್ಡಿ(28), ತಂದೆ ನಾಗಪ್ಪ ಉಳ್ಳೆಗಡ್ಡಿ(63) ಎಂಬಾತರಿಂದ ಈ ಕೃತ್ಯ ನಡೆದಿದೆ.
ಪ್ರೀತಿಸಿದ ಯುವತಿ ಜೊತೆಗೆ ಮಂಜುನಾಥ ಮದುವೆಗೆ ಆರಂಭದಲ್ಲಿ ಪೋಷಕರ ವಿರೋಧ ಮಾಡಿದ್ದರು.ಪ್ರೀತಿಸಿದ ಯುವತಿಯನ್ನೇ ಮದುವೆ ಆಗಲು ಹಠ ಹಿಡಿದಿದ್ದ ಮಂಜುನಾಥನ ಲವ್ ಮ್ಯಾರೇಜ್ ಗೆ ಹಸಿರು ನಿಶಾನೆ ಸಿಕ್ಕಿತ್ತು ನಿಶ್ಚಿತಾರ್ಥವೂ ಆಗಿತ್ತು ಮೊದುವೆಗೆ ಮೊದಲು ಪ್ರೇಮಿ ಉಸಿರು ನಿಲ್ಲಿಸಿದ್ದಾನೆ.ಮದುವೆ ಮಾಡಲು ಸಿದ್ಧತೆ ಮಾಡಿಕೊಳ್ತಿದ್ದರೂ ಕುಡಿದು ಬಂದು ಮಂಜುನಾಥ ಗಲಾಟೆ ಮಾಡ್ತಿದ್ದ ,ಮದುವೆಗೆ ಒಪ್ಪಿಕೊಳ್ಳಲು ತಡ ಮಾಡಿದಕ್ಕೆ ಕುಡಿತದ ಚಟಕ್ಕೆ ದಾಸನಾಗಿದ್ದ ಮಂಜುನಾಥ,ನಿನ್ನೆ ಕೂಡ ಕುಡಿದು ಬಂದು ತಾಯಿ ಜೊತೆಗೆ ಗಲಾಟೆಗೆ ಮಾಡಿದ್ದ,
ಇದರಿಂದ ಸಿಟ್ಟಿಗೆದ್ದು ಹಿರಿಯ ಮಗ ಗುರುಬಸಪ್ಪ ಮತ್ತು ತಂದೆ ನಾಗಪ್ಪ ಸೇರಿ ಮಂಜುನಾಥ ಕೊಲೆ ಮಾಡಿದ್ದಾರೆ.ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈಗಾಗಲೇ ಇಬ್ಬರು ಆರೋಪಿಗಳು ವಶಕ್ಕೆ ಪಡೆದಿರುವುದಾಗಿ ಎಸ್ಪಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.