ಬೆಳಗಾವಿ-ಬಹುಕೋಟಿ, ಕರೀಂ ಲಾಲಾ ನಕಲಿ ಛಾಪಾ ಕಾಗದ ಹಗರಣವನ್ನು ಬೆಳಕಿಗೆ ತಂದಿರುವ ಜಯಂತ್ ತಿಣೇಯೇಕರ್ ಮೇಲೆ ಅಟ್ಯಾಕ್ ಮಾಡಿರುವ ಕೆಲವು ದುಷ್ಕರ್ಮಿಗಳು ಜಯಂತ್ ಮೇಲೆ ಹಲ್ಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಕಲಿ ಛಾಪಾ ಕಾಗದ ಹಗರಣವನ್ನು ಬೆಳಕಿಗೆ ತಂದು ರಾಜ್ಯ ಸರ್ಕಾರಕ್ಕೆ ಸಾವಿರಾರು ಕೋಟಿ ರೂ ಉಳಿತಾಯ ಮಾಡಿ,ರಾಷ್ಟ್ರದ ಗಮನ ಸೆಳೆದಿದ್ದ ಖಾನಾಪೂರ ಮೂಲದ ಸಾಮಾಜಿಕ ಕಾರ್ಯಕರ್ತ ಜಯಂತ್ ತಿಣಿಯೇಕರ್ ಮೇಲೆ ಕೆಲವು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.ಈ ಘಟನೆ ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆ ವ್ಯಾಪ್ತಿಯ ಝಾಡ್ ಶಹಾಪೂರ ಬಳಿ ಇಂದು ಸಂಜೆ ನಡೆದಿದೆ.
ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ಕೆಲವು ದುಷ್ಕರ್ಮಿಗಳು ಜಯಂತ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದು,ಜಯಂತ ತಿಣಿಯೇಕರ ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಯಂತ ತಿಣಿಯೇಕರ್ ಅವರು ಆಗಿನ ಡಿಜಿಪಿ ಸಾಂಗ್ಲಿಯಾನಾ ಅವರನ್ನು ಭೇಟಿಯಾಗಿ, ಕರೀಂ ಲಾಲಾ ತೇಲಗಿ ನಡೆಸುತ್ತಿದ್ದ ನಕಲಿ ಛಾಪಾ ದಂಧೆಯ ಬಗ್ಗೆ ದೂರು ನೀಡಿದ್ದರು.
ಶುಕ್ರವಾರ ಸಂಜೆ ದುಷ್ಕರ್ಮಿಗಳು ಅವರ ಮೇಲೆ ಅಟ್ಯಾಕ್ ಮಾಡಿದ್ದು ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.