.ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಗಾಂಜಾ ಧಂದೆಯನ್ನು ತಡೆಯಲು ಬೆಳಗಾವಿ ಪೋಲೀಸರು ಯುದ್ಧ ಸಾರಿದ್ದು,ಈ ವಿಚಾರದಲ್ಲಿ ಇವತ್ತು ಭರ್ಜರಿ ದಾಳಿಯೂ ನಡೆದಿದ್ದು ಸಂತಸದ ಸಂಗತಿಯಾಗಿದೆ.
ಬೆಳಗಾವಿಯ ಸಿಸಿಬಿ ಇನೆಸ್ಪೆಕ್ಟರ್ ನಿಂಗನಗೌಡ ಪಾಟೀಲ ಅವರು ಬೆಳಗಾವಿಯಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿ, ಮಹಾರಾಷ್ಟ್ರದ ಇಬ್ಬರು ಡ್ರಗ್ ಫೆಡ್ಲರ್ ಗಳನ್ಬು ಬಂಧಿಸಿ 8 kg 300 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಮಿರಜ್ ನಗರದ ಇಬ್ಬರು ಡ್ರಗ್ ಫೆಡ್ಲರ್ ಗಳಾದ,ಅಮನ್ ಅಕ್ರಂ ಜಮಾದಾರ್,ಹಾಗೂ ಫಾರುಖ್ ಅಲ್ ನವಾಖಾನ್ ಇವರನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ಗಾಂಜಾ ಬೆಲೆ ಎರಡುವರೆ ಲಕ್ಷ ರೂ ಗಳಿವೆ ಎಂದು ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಹಾರಾಷ್ಟ್ರದ ವಿವಿಧ ಪ್ರದೇಶಗಳಿಂದ ಗಾಂಜಾ ಖರೀದಿ ಮಾಡಿ ಬಂಧಿತ ಇಬ್ಬರು ಫೆಡ್ಲರ್ ಗಳು ಬೆಳಗಾವಿಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ನಗರ ಪೋಲೀಸ್ ಆಯುಕ್ತ. ಡಾ. ಬೋರಲಿಂಗಯ್ಯ ಅವರು ಗಾಂಜಾ ಮಾರಾಟ ತಡೆಯುವ ನಿಟ್ಟಿನಲ್ಲಿ ಶಿಸ್ತಿನ ಕ್ರಮಗಳನ್ನು ಜರುಗಿಸುತ್ತಿರುವ ಹಿನ್ನಲೆಯಲ್ಲಿ ಡ್ರಗ್ ಫೆಡ್ಲರ್ ಗಳು ಒಬ್ಬೊಬ್ಬರಾಗಿ ಪೋಲೀಸರ ಬಲೆಗೆ ಬೀಳುತ್ತಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಗಾಂಜಾ ವಶಪಡಿಸಿಕೊಂಡಿರುವ ಸಿಸಿಬಿ ಪೋಲೀಸರಿಗೆ ಬಹುಮಾನ ಸಿಗಲೇಬೇಕು ಅನ್ನೋದು ಬೆಳಗಾವಿ ಸುದ್ದಿ ಡಾಟ್ ಕಾಮ್ ಆಶಯ…