ಬೆಳಗಾವಿ- ಸರ್ಕಾರ ಶಾಲೆಗಳ ಸುಧಾರಣೆಗೆ ಅದೆಷ್ಟು ಯೋಜನೆಗಳನ್ನು ಜಾರಿಗೆ ತಂದರೂ ಶಾಲೆಗಳ ಪರಿಸ್ಥಿತಿ ಬದಲಾಗಿಲ್ಲ,ಶಾಲೆ ಬೀಳುವ ಪರಿಸ್ಥಿತಿಯಲ್ಲಿದೆ ಎಂದು ಹೆದರಿ,ಗ್ರಾಮಸ್ಥರು,ಶೀಥಿಲಗೊಂಡಿರುವ ಶಾಲೆಯ ಎದುರು ಟೆಂಟ್ ಹಾಕಿ ಶಾಲೆಯಯ ಪ್ರಾರಂಭೋತ್ಸವ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನಲ್ಲಿ ನಡೆದಿದೆ.
ರಾಜ್ಯದಲ್ಲಿ ಇಂದಿನಿಂದ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿಶಾಲಾ ಮಕ್ಕಳು ಕುಳಿತುಕೊಳ್ಳಲು ಕೊಠಡಿಗಳೇ ಇಲ್ಲಾ.ಶೀತಲವಸ್ಥೆಯಲ್ಲಿರುವ ಶಾಲೆಯ ಕೊಠಡಿಗಳು.
ಶಾಲಾ ಆವರಣದಲ್ಲಿ ತಾತ್ಕಾಲಿಕ ಟೆಂಟ್ ನಿರ್ಮಾಣ ಮಾಡಿ ಪಾಠ ಹೇಳಿದ ಪ್ರಸಂಗ ಇಲ್ಲಿ ನಡೆದಿದೆ.
ಮಕ್ಕಳಿಗಾಗಿ ಆವರಣದಲ್ಲಿ ಟೆಂಟ್ ಹಾಕಿದ ಗ್ರಾಮಸ್ಥರು.
ರಾಮದುರ್ಗ ತಾಲೂಕಿನ ಮೂದೇನೂರ ಗ್ರಾಮದ,
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದುಸ್ಥಿತಿಯನ್ನು ಗಮನಿಸಿ ಟೆಂಟ್ ನಿರ್ಮಿಸಿ ಶಾಲೆಯ ಆರಂಬೋತ್ಸವ ಮಾಡಿದ್ದಾರೆ.
ನೂರು ವರ್ಷಗಳ ಇತಿಹಾಸ ಹೊಂದಿರುವ ಶಾಲೆಯಲ್ಲಿ ,ಮಕ್ಕಳಿಗೆ ಕಲಿಯಲು ಕುಳಿತುಕೊಳ್ಳಲು ಕೊಠಡಿಗಳೇ ಇಲ್ಲ.
ಹಲುವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ.
ಭಯದ ವಾತಾವರಣದಲ್ಲಿ ಮಕ್ಕಳು. ಶಾಲೆ ಕಲಿಯುವ ಪರಿಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಶಾಲೆಯ ಆವರಣದಲ್ಲಿ ಟೆಂಟ್ ಹಾಕಿ ಮಕ್ಕಳಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿರುವ ಗ್ರಾಮಸ್ಥರು.ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
315 ಮಕ್ಕಳಿಗೆ 6 ಶಿಕ್ಷಕರು . ಕೇವಲ 2 ಕೊಠಡಿಗಳು ಮಾತ್ರ ಇದ್ದು11 ಕೊಠಡಿಗಳಿದ್ದು ಪ್ರಾಥಮಿಕ ಶಾಲೆಯಲ್ಲಿ ಕೇವಲ ಎರಡು ಕೊಠಡಿಗಳು ಮಾತ್ರ ಮಕ್ಕಳಿಗೆ ಕಲಿಯಲು ಸುರಕ್ಷಿತವಾಗಿವೆ .ಸ್ಥಳೀಯ ಶಾಸಕ, ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ,ಟೆಂಟ್ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ ಗ್ರಾಮಸ್ಥರು.