ಬೆಂಗಳೂರು- ಕಳೆದ ಐದು ತಿಂಗಳಿಂದ ಬಿಡುಗಡೆಯಾಗದ ದೇವದಾಸಿಯರ ಮಾಶಾಸನವನ್ನು ಬಿಡುಗಡೆ ಮಾಡಿಸುವಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ್ ಅವರು ಯಶಸ್ವಿಯಾಗಿದ್ದಾರೆ. ಮುಖ್ಯಕಾರ್ಯದರ್ಶಿ ಗಳೊಂದಿಗೆ ಚರ್ಚಿಸಿ ಅವರಿಗೆ ಟಿಪ್ಪಣಿ ಕಳಿಸಿ ದೇವದಾಸಿಯರ ಮಾಶಾಸನ ಬಿಡುಗಡೆಯಾಗದ ವಿಷಯವನ್ನು ನಿನ್ನೆ ಸಚಿವರು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದರು. ದೇವದಾಸಿಯರ ಜೀವನೋಪಾಯಕ್ಕಾಗಿ ನೀಡಲಾಗುವ ವಿಳಂಬ ಮಾಡಿ ಪಾವತಿ ಮಾಡುವುದರ ಬಗ್ಗೆ ನಿನ್ನೆ ಮುಖ್ಯ ಕಾರ್ಯದರ್ಶಿಯವರಿಗೆ ಟಿಪ್ಪಣಿ ಕಳುಹಿಸಿದ್ದರು.
12 ಕೋಟಿ ರೂಪಾಯಿಗಳನ್ನು ದೇವದಾಸಿಯರ ಮಾಶಾಸನಕ್ಕಾಗಿ ಸರ್ಕಾರ ಮಹಿಳಾ ಅಭಿವೃದ್ಧಿ ಬ್ಯಾಂಕಿಗೆ ಬಿಡುಗಡೆ ಮಾಡಿದೆ.
ಬಡ ದೇವದಾಸಿಯರಿಗೆ ಮಾಶಾಸನ ನೀಡುವಲ್ಲಿ ಆಗುತ್ತಿರುವ ವಿಳಂಬವನ್ನು ನಿನ್ನೆ ಜಲ ಸಂಪನ್ಮೂಲ ಸಚಿವರು ಸಚಿವರು ಸಮಾಜ ಕಲ್ಯಾಣಇಲಾಖೆ, ಪಿಂಚಣಿ ನಿರ್ದೇಶಾಲಯದ ನಿರ್ದೇಶಕರೊಂದಿಗೆ ನಿನ್ನೆ ಸಭೆ ನಡೆಸಿ ತಕ್ಷಣ ಪರಿಹಾರ ಕಂಡುಕೊಳ್ಳಲು ಹಾಗೂ ಹಣ ಬಿಡುಗಡೆಗೆ ವ್ಯವಸ್ಥೆ ಮಾಡಲು ಸಮಾಜ ಕಲ್ಯಾಣ ಇಲಾಖೆಯಿಂದ ಇಂದು ಆದೇಶ ಹೊರಡಿಸಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ