ಬೆಳಗಾವಿ-ಕಳೆದ ಒಂದು ತಿಂಗಳಿನಿಂದ ಬೆಳಗಾವಿಯ ಗಾಲ್ಫ್ ಮೈದಾನದಲ್ಲೆ ಮನೆ ಮಾಡಿಕೊಂಡಿರುವ ಚಿರತೆಗೆ, ಸೋಶಿಯಲ್ ಮಿಡಿಯಾ ಖಿಲಾಡಿಗಳು ಆಧಾರ್ ಕಾರ್ಡ್ ಮಂಜೂರು ಮಾಡಿ ಜೋಕ್ ಮಾಡಿದ್ದಾರೆ.
ಚಿರತೆಯ ಹೆಸರು ಬಿಪಟ್ಯಾ ಬೆಳಗಾಂವಕರ,ಅಡ್ರೆಸ್ ಗಾಲ್ಫ್ ಫಾರೆಸ್ಟ್ ಏರಿಯಾ 1-1- 2018 ರಿಂದ ಬೆಳಗಾವಿಯ ನಿವಾಸಿ, ಎಂದು ಖಿಲಾಡುಗಳು ಆಧಾರ್ ಸಿದ್ದಪಡಿಸಿ,ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟು ಚಿರತೆ ಕಾರ್ಯಾಚರಣೆ ಕುರಿತು ಕಾಮಿಡಿ ಮಾಡಿದ್ದಾರೆ.
ಚಿರತೆಗೆ ಹೆಸರು ನಾಮಕರಣ ಮಾಡಿದ್ದಾರೆ,ಬಿಟಪ್ಯಾ ಬೆಳಗಾಂವಕರ ಎಂದು ಹೆಸರು ನಾಮಕರಣ ಮಾಡಿ ಅದು ಬೆಳಗಾವಿಯ ನಿವಾಸಿ ಎಂದು ಜೋಕ್ ಮಾಡಿದ್ದು ಈ ಆಧಾರ್ ಕಾರ್ಡ್ ಈಗ ಸೋಶಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಚಿರತೆ ಕುರಿತು ಇನ್ನೊಂದು ಜೋಕ್ ಆಗಿದೆ.ಚಿರತೆಯ ಪೋಟೋ ಹಾಕಿ,ನಾನು ಫ್ಯಾಮಿಲಿ ಸಮೇತ ಬೆಳಗಾವಿಗೆ ಶಿಪ್ಟ್ ಆಗುತ್ತಿದ್ದೇನೆ.ಇಲ್ಲಿಯ ಹವಾಗುಣವೂ ಚೆನ್ನಾಗಿದೆ.ಎಂದು ಕ್ಯಾಪಶನ್ ಬರೆದು ಕಾಮಿಡಿ ಮಾಡಿರುವ ಸೋಶಿಯಲ್ ಮಿಡಿಯಾ ಪ್ರತಿಭೆಗಳು ವಿವಿಧ ರೀತಿಯಲ್ಲಿ ಟ್ರೋಲ್ ಮಾಡಿ ಟೈಮ್ ಪಾಸ್ ಮಾಡುತ್ತಿದ್ದಾರೆ.
ಬೆಳಗಾವಿಯಲ್ಲಿ ಇರೋದು ಕಾಡು ಚಿರತೆ ಅಲ್ಲವೇ..???
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಮನೆ ಮಾಡಿಕೊಂಡ ಚಿರತೆ ಕಾಡು ಚಿರತೆ ಅಲ್ಲ,ಅದೊಂದು ಸಾಕು ಚಿರತೆ ಎನ್ನುವ
ಸುದ್ಧಿ ಈಗ ಬೆಳಗಾವಿಯಲ್ಲಿ ಸಾಕಷ್ಟು ಪ್ರಚಾರ ಪಡೆದಿದೆ.
ಬೆಳಗಾವಿಯ ಬೇಟೆಗಾರ ಬೇಟೆಗೆ ಹೋದಾಗ ಆತನಿಗೆ ಚಿರತೆ ಮರಿ ಸಿಕ್ಕಿತ್ತು ಆತ ಅದನ್ನು ಮನೆಯಲ್ಲಿ ಸಾಕಿದ್ದ ಒಂದು ವರ್ಷದ ಬಳಿಕ ಆತನಿಗೆ ಈ ಚಿರತೆಯನ್ನು ಕಂಟ್ರೋಲ್ ಮಾಡಲು ಸಾಧ್ಯವಾಗಿಲ್ಲ.ಆತ ನಂತರ ಈ ಚಿರತೆಯನ್ನು ಗಾಲ್ಫ್ ಅರಣ್ಯದಲ್ಲಿ ಬಿಟ್ಟಿದ್ದಾನೆ ಎನ್ನುವ ಸುದ್ದಿ ಹರಡಿದ್ದು,ಇದು ನಿಜವೋ ಅಥವಾ ವದಂತಿಯೋ ಅನ್ನೋದನ್ನು ಪೋಲೀಸರು ಪತ್ತೆ ಹಚ್ವ ಬೇಕಾಗಿದೆ.