ಸಾವಿನಲ್ಲೂ ವೈಫ್ ಗೆ ಸಾಥ್ ಕೊಟ್ಟು ಲೈಫ್ ಮುಗಿಸಿದ ಪತಿರಾಯ..

ಬೆಳಗಾವಿ- ಎರಡು ವರ್ಷದ ಹಿಂದೆ ವಿವಾಹವಾಹಿತ್ತು ಎರಡು ದಿನದ ಹಿಂದೆ,ಅನಾರೋಗ್ಯದಿಂದ ಪತ್ನಿ ಸಾವನ್ನೊಪ್ಪಿದ್ದಳು.ಪತ್ನಿಯ ಸಾವಿನಿಂದ,ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಪತ್ನಿಯ ಸಾವಿನಿಂದ ಮನನೊಂದ ಪತಿರಾಯ,ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಸದಾಶಿವ ರಾಮಪ್ಪ ಕಾಂಬಳೆ (೨೬) ಆತ್ಮಹತ್ಯೆ ಪ್ರಯತ್ನ ಮಾಡಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

80ರಷ್ಟು ಪ್ರತಿಶತ ದೇಹ ಬೆಂಕಿಗೆ ಸುಟ್ಟು ಗಂಭೀರ ಗಾಯಗಳಾಗಿದ್ದ ಸದಾಶಿವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ರೂಪಾ ಸದಾಶಿವ ಕಾಂಬಳೆ (೨೧) ಅನಾರೋಗ್ಯದಿಂದ ಕಳೆದ ಎರಡು ದಿನದ ಹಿಂದೆ ನಿಧನರಾಗಿದ್ದರು.

ಹೆಂಡತಿ ರೂಪಾ ಮೃತ ಹಿನ್ನೆಲೆ ಸದಾಶಿವ ತೀವ್ರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ‌. ವಿಜಯಪುರ ಜಿಲ್ಲೆ ಖಾಸಗಿ ಆಸ್ಪತ್ರೆಗೆ ಸದಾಶಿವ ದಾಖಲು ಮಾಡಲಾಗಿತ್ತು,ಚಿಕಿತ್ಸೆ ಫಲಕಾರಿಯಾಗದೆ ಸದಾಶಿವ ಕಳೆದ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನೊಪ್ಪಿದ್ದಾನೆ.

ಎರಡು ವರ್ಷದ ಹಿಂದೆ ಸಪ್ತಪದಿ ತುಳಿದಿದ್ದ ಜೋಡಿಗಳು,ಸಾವಿನಲ್ಲೂ ಒಂದಾಗಿದ್ದಾರೆ.ಐಗಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *