ಯಮಕನಮರಡಿ-ಕಳೆದ ವರ್ಷ ನಾಡ ಪಿಸ್ತೂಲಿನಿಂದ ಫೈರಿಂಗ್ ಮಾಡಿ ಜೈಲಿಗೆ ಹೋಗಿ ಇಗಷ್ಟೇ ಬಿಡುಗಡೆಯಾಗಿ ಮೊನ್ನೆ ಜನ್ಮ ದಿನ ಆಚರಿಸಿಕೊಂಡಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ವಿನಾಯಕ ಹೊರಕೇರಿ 27 ಮರ್ಡರ್ ಆದ ದುರ್ದೈವಿಯಾಗಿದ್ದಾನೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಕಳೆದ ವರ್ಷವಷ್ಟೆ ಓರ್ವನ ಮೇಲೆ,ಮೇಲೆ ಫೈರಿಂಗ ಮಾಡಿ ಪರಾರಿಯಾಗಿದ್ದ ವಿನಾಯಕನ ಕೊಲೆಯಾಗಿದೆ.
ಪೊಲೀಸರಿಂದ ಬಂಧಿಸಿದ ಬಳಿಕ ಜಾಮೀನಿನ ಮೇಲೆ ಹೊರಗಿದ್ದ ವಿನಾಯಕ, ಮೊನ್ನೆ ಜನ್ಮದಿನ ಆಚರಿಸಿಕೊಂಡಿದ್ದ,ವಿನಾಯಕನನ್ನು ಕೊಚ್ಚಿ ಕೊಲೆ ಮಾಡಿದ ಕಿರಾತಕರು ಪರಾರಿಯಾಗಿದ್ದಾರೆ.ಸ್ಥಳಕ್ಕೆ ಯಮಕನಮರಡಿ ಪೊಲೀಸರ ಬೇಟಿ ಪರಿಶೀಲನೆ ನಡೆಸಿದ್ದಾರೆ.ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ