ಬೆಳಗಾವಿ-ಡೆಂಟಲ್ ಆಸ್ಪತ್ರೆಯಲ್ಲೇ ಅಲ್ಲಿನ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ತೇರ್ ಬಜಾರ್ ನಲ್ಲಿರುವ ಡೆಂಟಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.ರಾಮದುರ್ಗ ಪಟ್ಟಣದ ಬಡಕೋಟಿ ಗಲ್ಲಿಯ ನಿವಾಸಿ ಕಾಶಿನಾಥ ಪೇಟೆ (51) ಆತ್ಮಹತ್ಯೆಗೆ ಶರಣಾಗಿದ್ದಾನೆ.ರಾಮದುರ್ಗ ಪಟ್ಟಣದ ಶೀಲಾ ಡೆಂಟಲ್ ಕ್ಲಿನಿಕ್‌ನಲ್ಲಿ ಅಟೆಂಡರ್ ಆಗಿದ್ದ ಕಾಶಿನಾಥ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಡಾ. ಸಂಜೀವ್ ದಾಣಿ ಎಂಬುವವರಿಗೆ ಸೇರಿದ ಹಲ್ಲಿನ ಆಸ್ಪತ್ರೆ ಇದಾಗಿದೆ.
ಕಾಶಿನಾಥ ಪೇಟೆ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಸ್ಥಳಕ್ಕೆ ರಾಮದುರ್ಗ ಠಾಣೆಯ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ