Breaking News

ಕಿತ್ತೂರಿಗೆ ಬ್ರೇಕಿಂಗ್,ಗೋಕಾಕಿಗೆ ಶಾಕೀಂಗ್ ನ್ಯೂಸ್!!

ಬೆಳಗಾವಿ – ಕಾಂಗ್ರೆಸ್ ಪಕ್ಷ ಎರಡನೇಯ ಕಂತಿನ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದು,ಗೋಕಾಕ್ ಕ್ಷೇತ್ರದಿಂದ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು,ಕಿತ್ತೂರಿನಿಂದ ಬಾಬಾಸಾಹೇಬ್ ಪಾಟೀಲ ಅವರ ಹೆಸರನ್ಬು ಕೊನೆಗೂ ಪೈನಲ್ ಮಾಡಿದೆ.

ಕಾಂಗ್ರೆಸ್ಸಿನ ಎರಡನೇಯ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಾಗಿದೆ. ಗೋಕಾಕ್ ಕ್ಷೇತ್ರದಿಂದ ಅಶೋಕ ಪೂಜಾರಿ ಅವರನ್ನು ಕೈಬಿಟ್ಟು,ಮಹಾಂತೇಶ್ ಕಡಾಡಿ,ಸವದತ್ರಿ ಕ್ಷೇತ್ರದಿಂದ ವಿಶ್ವಾಸ್ ವೈದ್ಯ,ಕಿತ್ತೂರಿನಿಂದ ಬಾಬಾಸಾಹೇಬ್ ಪಾಟೀಲ,ನಿಪ್ಪಾಣಿಯಿಂದ ಕಾಕಾಸಾಹೇಬ್ ಪಾಟೀಲ ಅವರ ಹೆಸರನ್ನು ಪೈನಲ್ ಮಾಡಲಾಗಿದೆ.

ಇಂದು ಸಂಜೆ ಹೊತ್ತಿಗೆ ಇನ್ನೊಂದು ಪಟ್ಟಿ ಬಿಡುಗಡೆಯಾಗಲಿದ್ದು ಅದರಲ್ಲಿ ಬೆಳಗಾವಿ ಜಿಲ್ಲೆಯ ಉಳಿದ ಕ್ಷೇತ್ರಗಳ‌ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ.

Check Also

ನಾಳೆ ಬೆಳಗಾವಿಯಲ್ಲಿ ನಡೆಯುವ ಮಹತ್ವದ ಕಾರ್ಯಕ್ರಮಕ್ಕೆ ಗಣ್ಯರ ದಂಡು

ಪತ್ರಿಕಾ ದಿನಾಚರಣೆ ನಾಳೆ; ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ ಬೆಳಗಾವಿ: ಬೆಳಗಾವಿ ಇಲೆಕ್ಟ್ರಾನಿಕ್ ಮೀಡಿಯಾ ಜರ್ನಾಲಿಸ್ಟ್ ಅಸೋಸಿಯೇಷನ್ ವತಿಯಿಂದ ಪತ್ರಿಕಾ …

Leave a Reply

Your email address will not be published. Required fields are marked *