ಬೆಳಗಾವಿ- ಭಾರತ ಸರ್ಕಾರದ ಬಜೆಟ್ ದೇಶದ 1275 ರೇಲ್ವೆ ನಿಲ್ಧಾಣಗಳನ್ನು ಅಮೃತ ಭಾರತ ರೇಲ್ವೆ ನಿಲ್ಧಾಣಗಳ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸುವ ಘೋಷಣೆ ಮಾಡಿತ್ತು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಯ ಪ್ರಥಮ ಹಂತದಲ್ಲಿ 508 ರೇಲ್ವೆ ನಿಲ್ಧಾಣಗಳನ್ನು ಅಭಿವೃದ್ಧಿಪಡಿಸಲು ಇಂದು ಶಿಲನ್ಯಾಸ ನೆರವೇರಿಸಿದ್ದಾರೆ.
ಪ್ರಧಾನಿಗಳ ಮಹತ್ವಾಕಾಂಕ್ಷೆಯ ಯೋಜನೆ ಅಮೃತ್ ಭಾರತ ನಿಲ್ಧಾಣ ಯೋಜನೆಗೆ ಬೆಳಗಾವಿ ಜಿಲ್ಲೆಯ ಎರಡು ನಿಲ್ಧಾಣಗಳು ಆಯ್ಕೆಯಾಗಿರುವದು ಸಂತಸದ ಸಂಗತಿಯಾಗಿದೆ.
ಬೆಳಗಾವಿ ಜಿಲ್ಲೆಯ ಘಟಪ್ರಭಾ ಮತ್ತು ಗೋಕಾಕ್ ರೋಡ್ ಈ ಎರಡೂ ರೈಲು ನಿಲ್ಧಾಣಗಳು ಅಮೃತ ಭಾರತ್ ನಿಲ್ದಾಣ ಯೋಜನೆಗೆ ಆಯ್ಕೆಯಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲನ್ಯಾಸ ಮಾಡಿದ್ದಾರೆ.ಕರ್ನಾಟಕದಲ್ಲಿ ಈ ಯೋಜನೆಗೆ ಒಟ್ಟು 55 ನಿಲ್ಧಾಣಗಳು ಆಯ್ಕೆಯಾಗಿದ್ದು ಅದರಲ್ಲಿ ಬೆಳಗಾವಿ ಜಿಲ್ಲೆಯ ಎರಡು ನಿಲ್ಧಾಣಗಳು ಪುನರಾಭಿವೃದ್ಧಿಯಾಗಲಿವೆ.
ಈ ಯೋಜನೆ ಯಡಿಯಲ್ಲಿ ನಿಲ್ಧಾಣದ ಪ್ರವೇಶದ್ವಾರ,ಪ್ರಯಾಣಿಕರ ವಿಶ್ರಾಂತಿ ಕೊಠಡಿ,ಶೌಚಾಲಯ,ಲಿಫ್ಟ್ವ್ಯ ವಸ್ಥೆ,ಎಸ್ಕಿಲೇಟರ್,ಇಂಟರನೆಟ್ ವೈಫೈ,ನಿಲ್ಧಾಣದ ಕಟ್ಟಡದ ಅಧುನೀಕರಣ,ಪ್ಲಾಟಫಾರ್ಮಗಳ ಅಧುನೀಕರಣ ಸೇರಿದಂತೆ,ನಿಲ್ಧಾಣದ ನಿರಂತರ ಅಭಿವೃದ್ಧಿಗೆ ಈ ಯೋಜನೆ ನಾಂದಿ ಹಾಡಲಿದೆ.