ಹೊಲದ ರಸ್ತೆಗಾಗಿ ಕಲಹ ನಡು ರಸ್ತೆಯಲ್ಲೇ ಮರ್ಡರ್…

ಚಿಕ್ಕೋಡಿ-ಜಮೀನಿನಲ್ಲಿ ರಸ್ತೆ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಗಲಾಟೆಯಾಗಿ,ಓರ್ವನ ಕೊಲೆಯಲ್ಲಿ ಗಲಾಟೆ ಅಂತ್ಯವಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಹೊರವಲಯದ ನೇಜ – ಶಮನೇವಾಡಿ ರಸ್ತೆ ಬಳಿ ಈ ಘಟನೆ ನಡೆದಿದೆ.ಸುನೀಲ್ ಖೋತ್ (45) ಕೊಲೆಯಾದ ವ್ಯಕ್ತಿ.

ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಸುನೀಲ್ ಖೋತ್ ಸಾವನ್ನೊಪ್ಪಿದ್ದಾನೆ.ಸುನೀಲ್ ಶಮನೇವಾಡಿ ಗ್ರಾಮದ ನಿವಾಸಿಯಾಗಿದ್ದಾನೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹಲವು ವರ್ಷಗಳಿಂದ ರಸ್ತೆ ವಿಚಾರವಾಗಿ ಕಲಹ ಇತ್ತು,
ಇಂದು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ಅಣ್ಣ- ತಮ್ಮಂದಿರ ನಡುವೆ,ಸಂಜೆ ರಾಜಿ ಪಂಚಾಯ್ತಿ ಮಾಡೋಣ ಎಂದು ಸಮಜಾಯಿಸಿ ಕಳುಹಿಸಿದ್ದ ಪೊಲೀಸರು.ಸಂಜೆ ಮತ್ತೆ ಗಲಾಟೆ‌ ಪ್ರಾರಂಭವಾಗಿ ಈ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಪ್ರಕರಣ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಶುರು ಮಾಡಿದ್ದಾರೆ.ಸ್ಥಳಕ್ಕೆ ಸದಲಗಾ ಪೊಲೀಸರು ಭೇಟಿ, ಪರಿಶೀಲನೆ ಮಾಡಿದ್ದಾರೆ.ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *