ಬೆಳಗಾವಿ -ಆಟದಲ್ಲಿ ಆರಂಭವಾದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ .ಈ ಜಗಳದಲ್ಲಿ ರನ್ನೀಂಗ್ ಚಾಂಪಿಯನ್ ಆಟಗಾರನ ಕೊಲೆಯಾಗಿದ್ದು ದುರ್ದೈವದ ಸಂಗತಿಯಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ವೆಂಕಟೇಶ ದಳವಾಯಿ(18)ಎಂಬಾತನ ಕೊಲೆಯಾಗಿದೆ.
ಇದೇ ಗ್ರಾಮದ ವೆಂಕಟೇಶ ಹಾಗೂ ರಾಘು ಪೆಂಟೆದ ಎಂಬ ಸಹೋದರರಿಂದ ಕೃತ್ಯ ನಡೆದಿದೆ.
ಗ್ರಾಮೀಣ ಆಟವಾದ ತಿಳಿ ಆಡುತ್ತಿದ್ದ ವೇಳೆ ವಾಗ್ವಾದ ನಡೆದಿದೆ.ಬಳಿಕ ಸಹೋದರು ಸೇರಿಕೊಂಡು ಚಾಕು ನಿಂದ ಇರಿದು ಕೊಲೆ ಮಾಡಿದ್ದಾರೆ.ಹೊಟ್ಟೆಗೆ ಚಾಕು ಇರಿತದಿಂದ ರಕ್ತಸ್ರಾವಾಗಿ ವೆಂಕಟೇಶ ಸಾವನ್ನೊಪ್ಪಿದ್ದಾನೆ.
ಬೆಳಗಾವಿ ಬಿಮ್ಸ್ ನಲ್ಲಿ ವೆಂಕಟೇಶ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಪೋಷಕರಿಗೆ ಶವ ಹಸ್ತಾಂತರ ಮಾಡಲಾಗಿದೆ.
ರನ್ನಿಂಗ್ ಸ್ಪರ್ಧೆಯಲ್ಲಿ ನ್ಯಾಷನಲ್ ಲೆವಲ್ ವರೆಗೆ ಹೋಗಿದ್ದ ವೆಂಕಟೇಶ.100 ಮೀಟರ್ ರನ್ನಿಂಗ್ ನಲ್ಲಿ ಹಲವು ಪ್ರಶಸ್ತಿ ಪಡೆದಿದ್ದ ,ಸವದತ್ತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು
ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ