ಬೆಳಗಾವಿ- ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅರ್ಭಟ ನಿರಂತರವಾಗಿದ್ದು,ಬೆಳಗಾವಿ ಗಡಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ
ಬೆಳಗಾವಿ ಜಿಲ್ಲೆಯ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕರ್ನಾಟಕ ಮಹಾರಾಷ್ಡ್ರದ ಗಡಿಯಲ್ಲಿ ವೇದಗಂಗಾ ನದಿಯು ಅಪಾಯಕಾರಿ ಸ್ವರೂಪ ತಾಳಿದ್ದು,ವೇದಗಂಗಾ ನದಿಯ ನೀರು ಪೂನಾ-ಬೆಂಗಳೂರು ,ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಪರಿಣಾಮ ಬೆಳಗಾವಿಯ ನಿಪ್ಪಾಣಿ ಬಳಿಯ ಯಮಗರ್ಣಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡ ಹಿನ್ನಲೆಯಲ್ಲಿ ಪೂನಾ- ಬೆಂಗಳೂರು ನಡುವಿನ ಸಂಚಾರ ಸ್ಥಗಿತಗೊಂಡಿದೆ.
ಜಲಾವೃತಗೊಂಡ ರಾಷ್ಟ್ರೀಯ ಹೆದ್ದಾರಿಯ 2 ಕಿ ಮೀ ಮೊದಲೇ ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಧಾರವಾಡ,ಹಿರೇಬಾಗೇವಾಡಿ,ಮತ್ತು ಹತ್ತರಕಿಯ ಟೋಲ್ ನಾಕಾದಿಂದ ಮಹಾರಾಷ್ಟ್ರಕ್ಕೆ ಹೋಗುವ ವಾಹನಗಳನ್ನು ಪರ್ಯಾಯ ರಸ್ತೆಯ ಮೂಲಕ ಡೈವೋರ್ಟ್ ಮಾಡಲಾಗುತ್ತಿದೆ.
ಬಹಳಷ್ಟು ವಾಹನಗಳು ರಾಷ್ಟ್ರೀಯ ಹೆದ್ದಾರಿ ಬಿಟ್ಟು ಪರ್ಯಾಯ ರಸ್ತೆಯ ಮೂಲಕ ಮಹಾರಾಷ್ಟ್ರಕ್ಕೆ ಹೋಗುತ್ತಿವೆ.
ಶಿವಾಜಿ ನಗರದಲ್ಲಿ ಮನೆಗಳಿಗೆ ನುಗ್ಗಿದ ನೀರು
ವಿಪರೀತ ಮಳೆಯಿಂದಾಗಿ ಬೆಳಗಾವಿಯ ಶಿವಾಜಿ ನಗರದ ಮನೆಗಳಿಗೆ ತಡರಾತ್ರಿ ನೀರು ನುಗ್ಗಿದ ಪರಿಣಾಮ, ಅಲ್ಲಿಯ ಜನ ಪರದಾಡಿದ್ರು
ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗುತ್ತಿದ್ದು ಅದಕ್ಕೆ ಶಾಶ್ವತ ಪರಿಹಾರ ಹುಡುಕಲು ಇಲ್ಲಿಯ ಜನ ಒತ್ತಾಯಿಸಿದ್ದಾರೆ.
ಖಾನಾಪೂರ ತಾಲ್ಲೂಕಿನ ಲೋಂಡಾ ಪ್ರದೇಶದಲ್ಲಿ ಮಳೆಯ ಅರ್ಭಟ ಜೋರಾಗಿದ್ದು ನೀರಿನಲ್ಲಿ ಲಾರಿಯೊಂದು ನೀರಿನಲ್ಲಿ ಕೊಚ್ವಿ ಹೋಗಿದೆ.
ಖಾನಾಪೂರ ತಾಲ್ಲೂಕಿನಲ್ಲಿ ಜಲಾವೃತಗೊಂಡ ಗದ್ದೆಗಳು.
ಎಂಕೆ ಹುಬ್ಬಳ್ಳಿಯ ಮಲಪ್ರಭಾ ನದಿಯ ಹಳೆಯ ಸೇತುವೆ ಮುಳುಗಿದೆ.