ಬೆಳಗಾವಿ- ಕೊರೋನಾ ಅಟ್ಟಹಾಸಕ್ಕೆ ಮತ್ತೆ ಗಡಿನಾಡು ಗುಡಿ ಬೆಳಗಾವಿ ಜಿಲ್ಲೆ ಗಡಗಡಾ ಅಂತ ನಡುಗುತ್ತಿದೆ ಯಾಕಂದ್ರೆ ಇವತ್ತು ಏಕಾ ಏಕಿ ಒಂದೇ ದಿನ ಜಿಲ್ಲೆಯಲ್ಲಿ 45 ಜನ ಸೊಂಕಿತರು ಪತ್ತೆಯಾಗಿದ್ದಾರೆ.
ಇಂದು ಸಂಜೆ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ಜಿಲ್ಲೆಯ ಜನರ ನಿದ್ದೆಗೆಡಿಸಿದೆ.ಬೆಳಗಾವಿ ನಗರ, ಮತ್ತು ತಾಲ್ಲೂಕಿನಲ್ಲಿ 36 ಜನ ಸೊಂಕಿತರು ಪತ್ತೆಯಾಗಿದ್ದು ಆತಂಕಕಾರಿ ಬೆಳವಣಿಗೆ ಆಗಿದೆ. ಕರ್ನಾಟಕ,ಗೋವಾ,ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಬೆಳಗಾವಿ ನಗರದಲ್ಲಿ ಕೊರೋನಾ ಸೊಂಕಿನ ತಾಂಡವ ನೃತ್ಯ ಮತ್ತೆ ಶುರುವಾಗಿದೆ.
ಬೆಳಗಾವಿ ತಾಲ್ಲೂಕು- 36
ಅಥಣಿ-0
ಬೈಲಹೊಂಗಲ-4
ಚಿಕ್ಕೋಡಿ-2
ಗೋಕಾಕ್ -0
ಹುಕ್ಕೇರಿ-1
ಖಾನಾಪೂರ-1
ರಾಮದುರ್ಗ-0
ರಾಯಬಾಗ-0
ಸವದತ್ತಿ -1
ಒಟ್ಟು- 45
ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ತಾಂಡವ ನೃತ್ಯ ಶುರುವಾಗಿದ್ದು ಸಾರ್ವಜಮಿಕರು ತಪ್ಪದೇ ಮಾಸ್ಕ್ ಹಾಕಿಕೊಂಡು ಸೈನಿಟೈಸರ್ ಉಪಯೋಗಿಸಿ,ಸಾಮಾಜಿಕ ಅಂತರ ಕಾಯ್ದುಕೊಂಡು ಸೇಫಾಗಿರಿ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ