ಬೆಳಗಾವಿ-ಭೌಗೋಳಿಕವಾಗಿ,ರಾಜಕೀಯವಾಗಿ,ಬೆಂಗಳೂರು ಹೊರತುಪಡಿಸಿದರೆ,ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆ ಹದಿನೆಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.ಹದಿನೆಂಟರಲ್ಲಿ ಹನ್ನೊಂದು ಕ್ಷೇತ್ರಗಳನ್ನು ಬಾಚಿಕೊಂಡಿರುವ ಕಾಂಗ್ರೆಸ್ ಈಗ ಬಿಜೆಪಿ ಭದ್ರಕೋಟೆಯನ್ನು ವಶಪಡಿಸಿಕೊಂಡಿದೆ.
ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ನಿಭಾಯಿಸುತ್ತ ಬಂದಿರುವ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಶಾಸಕರಲ್ಲಿ ಮಂತ್ರಿಯಾಗಲು ಗುದ್ದಾಟ ಶುರುವಾಗಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹಿಳಿ,ಲಕ್ಷ್ಮಣ ಸವದಿ,ಮತ್ತು ಲಕ್ಷ್ಮೀ ಹೆಬ್ಬಾಳಕರ ಅವರು ಸಿಎಂ ಡಿಸಿಎಂ ಜೊತೆಗೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳು ಹೆಚ್ಚಿವೆ.ಇವತ್ತು ಸಿಎಲ್ಪಿ ನಾಯಕ ಸಿದ್ರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರು ಮತ್ತೆ ದೆಹಲಿಗೆ ತೆರಳಲಿದ್ದು ಮಂತ್ರಿ ಯಾರಾಗ್ತಾರೆ ಅನ್ನೋದು ಇವತ್ತು ದೆಹಲಿಯಲ್ಲಿ ಡಿಸೈಡ್ ಆಗುತ್ತೆ.
ಮಂತ್ರಿಯಾಗಲು ಅಶೋಕ ಪಟ್ಟಣ ಸಿದ್ರಾಮಯ್ಯನವರಿಗೆ ಜೋತು ಬಿದ್ದಿದ್ದಾರೆ,ಪ್ರಕಾಶ್ ಹುಕ್ಕೇರಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸಂಪರ್ಕ ಮಾಡಿದ್ದಾರೆ.ಬೈಲಹೊಂಗಲದ ಮಹಾಂತೇಶ್ ಕೌಜಲಗಿ ಅವರೂ ಸಹ ಡಿ.ಕೆ ಶಿವಕುಮಾರ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದು,ಇವರ ಸರಳ ಸಜ್ಜನಿಕೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ನೆರವಾಗಲಿದೆ.ನಾಳೆ ಶನಿವಾರ ಬೆಂಗಳೂರಿನಲ್ಲಿ ಸಿಎಂ ಡಿಸಿಎಂ ಪ್ರಮಾಣವಚನ ನಡೆಯಲಿದ್ದು ಇವರ ಜೊತೆ ಎಷ್ಟು ಜನ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನುವದು ತೀವ್ರ ಕುತೂಹಲ ಕೆರಳಿಸಿದೆ.