Breaking News

ಬೆಳಗಾವಿಯಲ್ಲಿ ಹೈಟೆನ್ಷನ್ ವಾಯರ್ ತಾಗಿ ಬಾಲಕಿಯ ಬಲಿ…!

ಬೆಳಗಾವಿ-ಮನೆ ಮುಂದಿನ ಹೈಟೆನ್ಷನ್ ವೈಯರ್ ತಾಗಿ 13 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ,ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದೆ.

ಮಚ್ಛೆ ಗ್ರಾಮದ ಮಧುರಾ ಮೋರೆ (13) ಸ್ಥಳದಲ್ಲೇ ಮೃತಪಟ್ಟ ಬಾಲಕಿಯಾಗಿದ್ದಾಳೆ.ಮನೆಯ ಒಂದನೇ ಮಹಡಿ ಮೇಲೆ ಆಟ ಆಡುತ್ತ ನಿಂತಾಗ ತಾಗಿದ ಹೈಟೆನ್ಷನ್ ವೈಯರ್ ಬಾಲಕಿಯನ್ನು ಬಲಿ ಪಡೆದುಕೊಂಡಿದೆ.

ಹೆಸ್ಕಾಂ ನೋಟಿಸ್ ನೀಡಿದ್ದರೂ ನಿರ್ಲಕ್ಷ್ಯ ವಹಿಸಿ ಮನೆ ನಿರ್ಮಾಣ ಮಾಡಲಾಗಿತ್ತು.ಹೈಟೆನ್ಷನ್ ವೈಯರ್ ಇದ್ದು, ಮನೆ ಕಟ್ಟದಂತೆ ನೋಟಿಸ್ ನೀಡಿದ್ದ ಹೆಸ್ಕಾಂ ಎಚ್ಚರಿಕೆಯನ್ನು ನಿರ್ಲಕ್ಷ್ಯ,ಮಾಡಲಾಗಿತ್ತು ಎಂದು ಹೇಳಲಾಗಿದೆ.ಹೆಸ್ಕಾಂ ‌ನೋಟಿಸ್ ಉಲ್ಲಂಘನೆ ಮಾಡಿದ್ದ ಮನೆ ನಿರ್ಮಿಸಿಕೊಂಡಿದ್ದ ಮೋರೆ ಕುಟುಂಬ,ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.ಬೆಳಗಾವಿ ಗ್ರಾಮೀಣ ‌ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *