ಬೆಳಗಾವಿ- ಮಹಾರಾಷ್ಟದ ಸೊಲ್ಲಾಪೂರದಿಂದ ಬೆಳಗಾವಿಗೆ ಸಾಗಿಸಲಾಗುತ್ತಿದ್ದ ಸುಮಾರು ಆರು ಲಕ್ಷ ರೂ ಮೌಲ್ಯದ ನಾಲ್ಕು ಕೆಜಿ ಗಾಂಜಾ ಬೆಳಗಾವಿಯ ಸಿಇಎನ್ ಹಾಗೂ ಡಸಿಆರ್ಬಿ ಪೋಪೀಸರು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿಯ ಹತ್ತರಗಿ ಟೋಲ್ ಹತ್ತಿರ ಬೆಳಗಾವಿ ಜಿಲ್ಲಾ ಸಿಇಎನ್ ಸಿಪಿಐ ಗಡ್ಡೇಕರ ಅವರ ನೇತ್ರತ್ವದಲ್ಲಿ ದಾಳಿ ಮಾಡಿರುವ ಪೋಲೀಸರು ಗಾಂಜಾ ಸಾಗಿಸುತ್ತಿದ್ದ,ಪುರುಷೋತ್ತಮ ರಾಮಚಂದ್ರ ಕೌಲಗಿ ವಯಾ 42 ವರ್ಷ ಸಾ. ಪಂಡರಪುರ ಜಿ. ಸೊಲ್ಲಾಪುರ,ಸಾಹೇಬರಾವ ವಿಶ್ವನಾಥ್ ಪಾಲಿಕೆ ಸಾ. ಹಲದೈವಡಿ ವಯಾ 50 ವರ್ಷ ತಾ. ಸಾಂಗೋಲಾ ಜಿ. ಸೊಲ್ಲಾಪುರ ಎಂಬಾತರನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದಿಂದ ಬೆಳಗಾವಿಗೆ ಗಾಂಜಾ ಸಪ್ಲಾಯ್ ಮಾಡುವ ಜಾಲವನ್ನು ಬೆಳಗಾವಿ ಪೋಲೀಸರು ಪತ್ತೆ ಮಾಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ