ಬೆಳಗಾವಿ VTU ಗೆ ಟ್ರಬಲ್ ಫೇಸ್ ಕರೆಂಟ್ ಶಾಕ್…!!

ಬೆಳಗಾವಿ-ಈ‌ ತಿಂಗಳ ವಿದ್ಯುತ್ ಬಿಲ್ ಕಂಡು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿಗಳು ಹೌಹಾರಿದ್ದಾರೆ.ಯಾಕಂದ್ರೆ ಈ ಬಾರಿ VTU ಗೆ ಟ್ರಬಲ್ ಫೇಸ್ ಕರೆಂಟ್ ಶಾಕ್ ತಟ್ಟಿದೆ.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ 18 ಲಕ್ಷ ಕರೆಂಟ್ ಬಿಲ್ ಬಂದಿದೆ.ವಿದ್ಯುತ್ ಬಿಲ್‌ನಿಂದ ಶಾಕ್‌ಗೆ ಒಳಗಾದ ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್.

ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗದಿಂದ ವಿದ್ಯುತ್ ದರ ಏರಿಕೆ ಹಿನ್ನಲೆ,ವಿದ್ಯುತ್ ದರ ಏರಿಕೆಯಿಂದ ಬೆಳಗಾವಿಯ ವಿಟಿಯುಗೆ 5 ಲಕ್ಷ ರೂ ಹೆಚ್ಚುವರಿ ಬಿಲ್ ಬಂದಿದೆ.ರಾಜ್ಯದ ಐದು ಕಡೆ ವಿಭಾಗೀಯ ಕೇಂದ್ರಗಳನ್ನು ಹೊಂದಿರುವ ವಿಟಿಯು,ವಿಭಾಗೀಯ ಕೇಂದ್ರ ಹಾಗೂ ವಿಟಿಯು ಕ್ಯಾಂಪಸ್ ಸೇರಿ ಜೂನ್ ತಿಂಗಳಲ್ಲಿ 35 ಲಕ್ಷ ಬಿಲ್ ಬಂದಿದೆ.

ಬೆಳಗಾವಿಯಲ್ಲಿರುವ ವಿಟಿಯು ಕ್ಯಾಂಪಸ್‌ದಷ್ಟೇ ಈ ತಿಂಗಳು 18 ಲಕ್ಷ ಬಿಲ್ ನೀಡಿದ ಹೆಸ್ಕಾಂ ಶಾಕ್ ಕೊಟ್ಟಿದೆ‌.ವಿಟಿಯು ಮುಖ್ಯ ಕ್ಯಾಂಪಸ್ ಸೇರಿ 6 ವಿಭಾಗೀಯ ಕೇಂದ್ರಗಳ ಮೇ ತಿಂಗಳ ವಿದ್ಯುತ್ ಬಿಲ್ 35 ಲಕ್ಷ ಬಂದಿದೆ.
ಮಾರ್ಚ್ ತಿಂಗಳಲ್ಲಿ 25,56,928 ರೂ, ಎಪ್ರಿಲ್ ತಿಂಗಳಲ್ಲಿ 25,29,021 ರೂ, ವಿದ್ಯುತ್ ಬಿಲ್ ಪಾವತಿಸಿದ್ದ ವಿಟಿಯು,
ಮೇ ತಿಂಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ 35,05,869 ಬಿಲ್ ನೀಡಿರುವ ಹೆಸ್ಕಾಂ VTU ಗೆ ಶಾಕ್ ಕೊಟ್ಟಿದೆ.

ಏಕಾಏಕಿ 10 ಲಕ್ಷ ಬಿಲ್ ಬಂದಿರುವುದಕ್ಕೆ ಕಂಗಾಲಾಗಿರುವ ವಿಟಿಯು ಆಡಳಿತ ಮಂಡಳಿ,
10 ಲಕ್ಷ ಹೆಚ್ಚುವರಿ ಬಿಲ್ ಬಂದಿರುವುದಕ್ಕೆ ಹೆಸ್ಕಾಂ‌ಗೆ ಪತ್ರಬರೆಯಲು ಮುಂದಾಗಿದೆ.ಗೊಂದಲ ಬಗೆಹರೆದ ಬಳಿಕವಷ್ಟೇ ಹೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿಸಲು ವಿಟಿಯು ನಿರ್ಧಾರ ಮಾಡಿದೆ.

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *